ಬೇಕಾಗುವ ಪದಾರ್ಥಗಳು

ಬಾದಾಮಿ- 1 ಬಟ್ಟಲು (ನೆನೆಸಿ ಸಿಪ್ಪೆ ತೆಗೆದದ್ದು)
ಹಾಲು – ಅರ್ಧ ಲೀಟರ್
ಸಕ್ಕರೆ- 100 ಗ್ರಾಂ
ಅಕ್ಕಿ- 2 ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ರೋಸ್ ವಾಟರ್- 1 ಚಮಚ

ಮಾಡುವ ವಿಧಾನ…
ಒಲೆಯ ಮೇಲೆ ಪಾತ್ರಯೊಂದನ್ನು ಇಟ್ಟು ಅದಕ್ಕೆ ಹಾಲು ಹಾಕಿ ಬಿಸಿ ಮಾಡಬೇಕು. ನಂತರ ಅಕ್ಕಿಯಲ್ಲಿರುವ ನೀರನ್ನು ತೆಗೆದು ಚೆನ್ನಾಗಿ ರುಬ್ಬಿಕೊಳ್ಳಬೇಕು. ಕಾಯಿಸಿಕೊಂಡ ಹಾಲಿಗೆ ರುಬ್ಬಿಟ್ಟುಕೊಂಡ ಸಕ್ಕರೆ, ಏಲಕ್ಕಿ ಪುಡಿ ಹಾಕಿ, ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಉರಿಯನ್ನು ಸಣ್ಣ ಮಾಡಿ, ಕತ್ತರಿಸಿಕೊಂಡ ಬಾದಾಮಿ ಹಾಕಿ 2 ನಿಮಿಷ ಕುದಿಯಲು ಬಿಡಬೇಕು. ತದನಂತರ ರುಬ್ಬಿಕೊಂಡ ಅಕ್ಕಿಯನ್ನು ನಿಧಾನಗತಿಯಲ್ಲಿ ಮಿಶ್ರಣ ಮಾಡಬೇಕು. ಹಾಲು ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಹಾಲು ಗಟ್ಟಿ ಬರುತ್ತಿದ್ದಂತೆಯೇ ಒಲೆಯನ್ನು ಆರಿಸಿ, ರೋಸ್ ವಾಟರ್ ಮತ್ತು ಹಾಕಬೇಕು. ಇದು ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿಟ್ಟು ಮತ್ತಷ್ಟು ತಣ್ಣಗೆ ಮಾಡಿದರೆ ರುಚಿಕರವಾದ ಬಾದಾಮಿ ಫಿರ್ನಿ ಸವಿಯಲು ಸಿದ್ಧ.

Leave a Reply