ಹುಟ್ಟಿದಾಗಲಿನಿಂದ ಅಮ್ಮನ ಮಗನಾಗಿ ಬೆಳೆದ ಸೂರ್ಯನಿಗ್ಯಾಕೋ ಅಪ್ಪನ ಮೇಲೆ ಪ್ರೀತಿ-ಮಮತೆಯೆಲ್ಲ ಅಷ್ಟಕಷ್ಟೆ. ಸೇನೆಯಲ್ಲಿದ್ದು ನಿವೃತ್ತಿಯಾದರೂ ಅಪ್ಪನ ಶಿಸ್ತು ಪಾಲನೆ ಅವನಿಗೆ ನುಂಗಲಾರದ ಬಿಸಿತುಪ್ಪ.ಅಪ್ಪ ಏನೇ ಮಾಡಿದ್ರೂ ಅವನಿಗೆ
ಸಹನೆಯಾಗುತ್ತಿರಲಿಲ್ಲ, ಅಪ್ಪನ ಕಂಡರೆ ಬರೀ ಸಿಡಿಮಿಡಿ. ಅದೊಂದು ದಿನ ಅಮ್ಮ ಅವರ ತವರುಮನೆಗೆ ಹೋದ ಸಮಯ.

ಮನೇಲಿದ್ರೆ ಅಪ್ಪನ ಕಾಟ ಬೇಡವೆಂದು ಅಪ್ಪನಿಗೆ ತಿಳಿಸದೇ, ಗೆಳೆಯರ ಗುಂಪಿನ ಜೊತೆ ತನ್ನ ಹೊಸ ಬೈಕಿನಲ್ಲಿ ಪ್ರವಾಸ
ಹೊರಟಿದ್ದ ಸೂರ್ಯ. ಇತ್ತ ಅಪ್ಪ ಮಗ ಬರುವನೆಂದು ಊಟಕ್ಕೆ ತಯಾರಿ ಮಾಡಿ ಕಾಯುತ್ತಿದ್ದಗ ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು ಆಸ್ಪತ್ರೆಯಿಂದ ಟೆಲಿಫೋನ್ ಬಂತು. ಆಸ್ಪತ್ರೆಯಿಂದ ಮರಳಿ ಬರುವಾಗ ಮಗನಲ್ಲಿ ಮತ್ತೆ ಅಪ್ಪನ ರಕ್ತ ಹರಿಯುತಿತ್ತು
ಅಪ್ಪನಿಗೆ ಹೊಸಜೀವನ ಸಿಕ್ಕಿತ್ತು||

– ಶುಭಶ್ರೀ ಭಟ್ಟ, ಬೆಂಗಳೂರು

Leave a Reply