ಹಿಂದಿನ ತಲೆಮಾರಿನವರ ಆರೋಗ್ಯದ ಗುಟ್ಟು ಅವರ ಆಹಾರ ಸಂಸ್ಕೃತಿ ಆಗಿತ್ತು. ಮುಖ್ಯವಾಗಿ ಅವರು ಶುದ್ಧವಾದ ನೀರನ್ನು ಕುಡಿಯುತ್ತಿದ್ದರು. ಅದರಲ್ಲೂ ನೀರನ್ನು ಕುದಿಸಿ ಆರಿಸಿ ಕುಡಿಯುತ್ತಿದ್ದರು. ಕೆಲವರು ಬೆಚ್ಚಗಿನ ನೀರನ್ನೇ ಕುಡಿಯುತ್ತಿದ್ದರು.

ಬಿಸಿ ನೀರಿನ ಪ್ರಯೋಜನದ ಬಗ್ಗೆ ಜಪಾನಿನ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಮೈಗ್ರೇನ್, ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಕೀಲುಗಳ ನೋವು, ಹೃದಯ ಬಡಿತ ಹೆಚ್ಚಳ, ಎಪಿಲೆಪ್ಸಿ, ಕೊಲೆಸ್ಟ್ರಾಲ್ , ದೈಹಿಕ ಅಸಮತೋಲನ, ಅಸ್ತಮಾ, ಗರ್ಭಕೋಶ ಹಾಗೂ ಮೂತ್ರ ಕೋಶ ಸಂಬಂಧಿತ ರೋಗಗಳು, ಹೊಟ್ಟೆಯ ಸಮಸ್ಯೆ, ಹಸಿವು, ಕಣ್ಣು ಕಿವಿ ಹಾಗೂ ಗಂಟಲಿಗೆ ಸಂಬಂಧಿಸಿದ ಕಾಯಿಲೆಗಳು, ತಲೆನೋವು ಸಮಸ್ಯೆಗಳು ಮುಂತಾದವುಗಳನ್ನು ಬಿಸಿ ನೀರು ದಿನವೂ ಕುಡಿಯುವುದರಿಂದ ನಿವಾರಿಸಿಕೊಳ್ಳಬಹದು ಎಂದು ಹೇಳುತ್ತಾರೆ.

ರಾತ್ರಿ ಮಲಗಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಎರಡು ಗ್ಲಾಸ್ ಬಿಸಿ ನೀರು ಕುಡಿಯಬೇಕು. ಕೆಲವೊಮ್ಮೆ ಪ್ರಾರಂಭದಲ್ಲಿ ಕುಡಿಯಲು ಕಷ್ಟ ಆಗಬಹುದು ಆದ್ರೆ ನಂತರ ಅದು ಅಭ್ಯಾಸ ಆಗಿ ಬಿಡುತ್ತದೆ. ಬೆಚ್ಚಗಿನ ನೀರು ಕುಡಿದ ನಂತರ ಸುಮಾರು ೪೫ ನಿಮಿಷ ಏನನ್ನೂ ಸೇವಿಸಬಾರದು. ಈ ಚಿಕಿತ್ಸೆಯು ಹಲವಾರು ರೋಗಗಳನ್ನು ನಿವಾರಿಸಿಕೊಳ್ಳುತ್ತದೆ.

ತಣ್ಣೀರು ಸೇವನೆಯಿಂದ ಯೌವನದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ವಯಸ್ಸು ದಾಟುತ್ತಿದ್ದಂತೆ ಹೃದಯ ಮತ್ತು ಯಕೃತ್ತಿನ ರೋಗಗಳಿಗೆ ಕಾರಣ ಆಗುತ್ತದೆ. ಸಣ್ಣ ಹಾಗೂ ದೊಡ್ಡ ಕರುಳಿಗೆ ಪರಿಣಾಮ ಆಗುತ್ತದೆ. ಅತೀ ಕೋಲ್ಡ್ ಡ್ರಿಂಕ್ಸ್ ಸೇವನೆ ದೇಹಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

Leave a Reply