ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರು ಕೇಳಿದರೆ ನೀರಿನ ಜತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಿದ್ದ ಕಾಲ ಈಗಿಲ್ಲ. ಆದರೆ ಅದೊಂದು ಸಂಪ್ರದಾಯ.

ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ತಿಳಿದಿದ್ದ ಹಿಂದಿನವರು ಇದನ್ನು ರೂಢಿಸಿಕೊಂಡಿದ್ದರು. ಇದು ಹೆಚ್ಚು ಜನರಿಗೆ ಗೊತ್ತಿರುವುದಿಲ್ಲ. ಬೆಲ್ಲವನ್ನು ತಿಂದರೆ ಅನೇಕ ಸಣ್ಣಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ ದೊಡ್ಡ ಸಮಸ್ಯೆಗಳನ್ನು ದೂರವಿಡಬಹುದು.

ಬೆಲ್ಲದ ಹತ್ತು ಪರಿಣಾಮಕಾರಿ ಗುಣಗಳು

1. ಸಿಹಿ ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

2. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು. ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಂಡರೆ ಹೊಟ್ಟೆಯನ್ನು ತಂಪಾಗಿಸುತ್ತದೆ.

3. ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣಾಂಶ ಅತ್ಯಧಿಕವಾಗಿದೆ.

4. ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ತಡೆಗಟ್ಟಬಹುದು.

5. ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

6. ಗಂಟಲು ಕೆರೆತ ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.

7. ನಿಯಮಿತವಾದ ಬೆಲ್ಲದ ಸೇವನೆ ಸಂಧಿ ನೋವನ್ನು ಕಡಿಮೆ ಮಾಡುತ್ತದೆ, ಮಂಡಿನೋವು ಕೈಕಾಲು ನೋವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿ.

8. ಮೈಗ್ರೇನ್(ಅರ್ಧತಲೆಶೂಲೆ) ಕಾಯಿಲೆಯನ್ನು ಗುಣಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.

9. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲ ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ.

10. ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ. ಸಕ್ಕರೆಗಿಂತ ಬೆಲ್ಲ ಎಲ್ಲ ರೀತಿಯಿಂದಲೂ ಉತ್ತಮ.

Leave a Reply