ಆರು ವರ್ಷದ ಪುಟ್ಟ ಬಾಲೆಯೊಬ್ಬಳು ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ಭಿಕ್ಷೆ ಬೇಡಿ ಬಂದು ಆರೈಕೆ ಮಾಡುತ್ತಿರುವ ಮನಮಿಡಿಯುವ ದೃಶ್ಯಗಳು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಈ ಪುಟ್ಟ ಮಗು ತಾಯಿಯ ತಲೆ ಬಾಚುವ ದೃಶ್ಯ, ಜ್ಯೂಸ್ ಕುಡಿಸುತ್ತಿರುವ ದೃಶ್ಯಗಳು ಕಾಳಜಿಯಿಂದ ಮಾತನಾಡುತ್ತಿರುವ ದೃಶ್ಯಗಳು ನೋಡಿದವರ ಮನಕಲುಕುತ್ತಿವೆ.

ತಾಯಿ ಕಾರಟಗಿ ತಾಲೂಕಿನ ಸಿದ್ದಾಪುರದ ದುರ್ಗಮ್ಮ ಅವಳನ್ನು ನೋಡಿಕೊಳ್ಳುತ್ತಿರುವ ಪುಟ್ಟ ಬಾಲಕಿ 6 ವರ್ಷದ ಭಾಗ್ಯ. ಆ ಮಗು ನನ್ನ ಅಪ್ಪಯ್ಯ ಬರುತ್ತಾನೆ ಎಂದು ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಆಸೆಗಣ್ಣಿನಿಂದ ಕಾಯುತ್ತಿದ್ದಾಳೆ, ಆದ್ರೆ ಅವರ ಅಪ್ಪಯ್ಯ ಬಂದಿಲ್ಲ. ಈತ ಆ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾನೆ. ನಾಲ್ಕು ದಿನಗಳು ಕಳೆದಿವೆ. ತಾಯಿಯ ಆರೈಕೆಯನ್ನು, ಆ ಆರು ವರ್ಷದ ಮುಗ್ಧ ಬಾಲಯೇ ಮಾಡುತ್ತಿದ್ದಾಳೆ. ಆಸ್ಪತ್ರೆಯ ಆವರಣ ಸುತ್ತಮುತ್ತ ಭಿಕ್ಷೆ ಬೇಡಿ ಬಂದ ಹಣದಲ್ಲಿ ತಾಯಿಗೆ ಬೇಕಾದ ಪದಾರ್ಥಗಳನ್ನು ತಂದು ನೋಡಿಕೊಳ್ಳುತ್ತಿದ್ದಾಳೆ. ದುರ್ಗಮ್ಮ ಹಾಗೂ ಮಗಳು ಭಾಗ್ಯ ಕಳೆದ ನಾಲ್ಕು ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ. ದುರ್ಗಮ್ಮನ ಗಂಡ ಅರ್ಜುನ್ ಎಂಬುವವರು ಬಿಟ್ಟುಹೋಗಿದ್ದಾರೆ. ತಲೆನೋವು, ಹೊಟ್ಟೆನೋವು ಹಾಗೂ ಒಂಚೂರು ಮಾನಸಿಕವಾಗಿ ಕುಗ್ಗಿದ ದುರ್ಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಬಂದ ಇತರೆ ರೋಗಿಗಳ ಪಾಲಕರ ಬಳಿ ಭಿಕ್ಷೆ ಬೇಡಿ ಬಂದ ಹಣದಲ್ಲಿ ಎಳೆನೀರು, ಹಾಲು ತಂದು ತಾಯಿಗೆ ಕುಡಿಸುತ್ತಾಳೆ, ಜನರು ರೊಟ್ಟಿ ಅನ್ನ ಕೊಟ್ಟರೆ ತಾಯಿಗೆ ಕೊಟ್ಟು ತಾನು ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ತಾಯಿಗೆ ತಲೆ ಬಾಚುವುದು, ಸ್ವಚ್ಛಗೊಳಿಸುವುದು ಎಲ್ಲಾ ಕೆಲಸ ಮುಗ್ಧ ಬಾಲೆ ಭಾಗ್ಯ ಮಾಡುತ್ತಾಳೆ

ಭಾಗ್ಯಳಿಗೆ ಒಬ್ಬ ಅಣ್ಣ ಇದ್ದಾನೆ. ಹೆಸರು ವಂಕಟೇಶ್ ನಾಲ್ಕನೇ ತರಗತಿ ಓದುತ್ತಾನೆ. ಭಾಗ್ಯ 1 ನೇ ತರಗತಿ ಓದುತ್ತಾಳೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರೆ ರೋಗಿಗಳು ಮತ್ತವರ ಸಂಬಂಧಿಗಳೂ ಸಹ ಮಾನವೀಯ ದೃಷ್ಟಿಯಿಂದ ಈ ತಾಯಿ ಮಗುವಿಗೆ ಸಹಾಯ ಮಾಡಿದ್ದಾರೆ. ಭಾಗ್ಯಳ ತಂದೆ ಅರ್ಜುನ್ ಎರಡನೇ ಮದುವೆಯಾಗಿದ್ದಾನೆ. ಆ ಹಿನ್ನೆಲೆ ದುರ್ಗಮ್ಮ ಮಾನಸಿಕವಾಗಿ ಕುಗ್ಗಿದ್ದಾಳೆ. ಇದೆ ಕಾರಣಕ್ಕೆ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ. ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದು ಕಷ್ಟ ಅಂತ ವೈದ್ಯರು ಮನೆಗೆ ಹೋಗಲು ಹೇಳಿದ್ದಾರೆ.

courtesy: samyuktha karnataka

Leave a Reply