ಯುವಕನೊಬ್ಬನನ್ನು ವೇಗವಾಗಿ ಚಲಿಸುತ್ತಿರುವ ರೈಲಿನಿಂದ ಪೋಲೀಸನೋರ್ವ ದೂಡಿ ಹಾಕಿ ಕೊಂದ ಕುರಿತು ಪಾಟ್ನಾದಲ್ಲಿ ದೂರು ದಾಖಲಾಗಿದೆ. 22ರ ಹರೆಯದ ಯುವಕ ವೆಂಕಟೇಶ್ ಎಂಬಾತನ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ರಾಂಚಿ -ಪಾಟ್ನಾ ಜನ್ಮ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ್ದಕ್ಕಾಗಿ ವೆಂಕಟೇಶ್ ಎಂಬಾತನೊಂದಿಗೆ ಪೋಲೀಸರು ಹಣ ಕೇಳುತ್ತಿದ್ದರು.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಣ ನೀಡಿಲ್ಲ ಎಂದು ವೆಂಕಟೇಶನನ್ನು ಪೋಲೀಸನೋರ್ವ ಓಡುತ್ತಿರುವ ರೈಲಿನಿಂದ ಕೆಳಕ್ಕೆ ತಳ್ಳಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ರೈಲ್ವೆ ಪೋಲೀಸ್ ಅಧಿಕಾರಿ ತಳ್ಳಿ ಹಾಕಿದ್ದಾರೆ. ಯುವಕ ಮದ್ಯಪಾನಿಯಾಗಿದ್ದ ಸೆರೆಯಾಗುವೆನೆಂಬ ಭಯದಿಂದ ರೈಲಿನಿಂದ ಜಿಗಿದಿದ್ದಾನೆ ಎಂದು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ತಂದೆ ತಾಯಿಯರಿಗೆ ಶವವನ್ನು ಹಸ್ತಾಂತರಿಸಲಾಗಿದೆ. ಆದರೆ ಘಟನೆಯ ಕುರಿತು ತೀವ್ರ ತನಿಖೆಯಾಗುತ್ತಿದೆಯೆಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Leave a Reply