ಚಿಕನ್ ಇನ್ ವೈಟ್ ಗ್ರೇವಿ

ಬೇಕಾಗುವ ಸಾಮಗ್ರಿಗಳು:

ಕೋಳಿಮಾಂಸ – 1/2 ಕೆಜಿ., ಹಾಲು – 1/4 ಲೀ., ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀ.ಸ್ಪೂ., ಕಾರ್ನಫೆÇ್ಲೀರ್ – 5 ಟೀ. ಸ್ಪೂ., ಕರಿ ಮೆಣಸಿನ ಹುಡಿ – 1 ಟೀ.ಸ್ಪೂ., ಎಣ್ಣೆ – 1 ಟೀ.ಸ್ಪೂ., ಉಪ್ಪು – ರುಚಿಗೆ, ಹಸಿಮೆಣಸು – 6-7

ಮಾಡುವ ವಿಧಾನಗಳು:

ಕೋಳಿಯನ್ನು ಹಾಲು ಹಾಗೂ ಉಪ್ಪು ಹಾಕಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿ ಮೆಣಸನ್ನು ಹುರಿಯಿರಿ. ಇದಕ್ಕೆ ಕೋಳಿ ಹಾಗೂ ಹಾಲಿನ ಮಿಶ್ರಣವನ್ನು ಸುರಿಯಿರಿ. ಕಾರ್ನ್‍ಫೆÇ್ಲೀರನ್ನು ತಣ್ಣಗಿನ ಹಾಲಿನಲ್ಲಿ ಕಲಸಿ ಮೆಲ್ಲಮೆಲ್ಲನೆ ಕೋಳಿ ಮಿಶ್ರಣಕ್ಕೆ ಸೇರಿಸಿ, ಕೈಯಾಡಿಸುತ್ತಲಿರಿ. ಮಸಾಲೆ ದಪ್ಪಗಾಗುತ್ತಾ ಬಂದಾಗ ಕರಿ ಮೆಣಸಿನ ಹುಡಿಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ, ಬಿಸಿಯಿರುವಾಗಲೇ ಬಡಿಸಿರಿ.

Leave a Reply