ರೂಮಿ ಸರಿಯಿಲ್ಲ, ಸಂಗೀತ, ನಾಟಕ, ಗಾಯನಗಳನ್ನು ಪ್ರೋತ್ಸಾಹಿಸುತ್ತಾನೆ. ವಿದ್ಯೆಗೆ ಪ್ರಾಧಾನ್ಯ ಇಲ್ಲ. ಧರ್ಮದ ದಾರಿಯಿಂದ ದೂರ ಸರಿದಿದ್ದಾನೆ.

ಹಾಗಂತ ಅನೇಕರು ರೂಮಿಯನ್ನು ದೂರುತ್ತಿದ್ದರು. ರೂಮಿ ಯಾವುದಕ್ಕೂ ಉತ್ತರ ಕೊಡುವ ಗೋಜಿಗೇ ಹೋಗುತ್ತಿರಲಿಲ್ಲ.

ಮತ್ತೊಂದು ಮೂಲದ ಪ್ರಕಾರ ಒಮ್ಮೆ ರೂಮಿ ಇದಕ್ಕೆ ಉತ್ತರಿಸಿದ್ದರು:
‘ಏನೇ ವ್ಯಾಪಾರ ಆದ್ರೂ ಲೆಕ್ಕ ಮಾಡೋದು ದಿನದ ಕೊನೆಗೇ ತಾನೆ? ಈಗ ಸುಮ್ನಿದ್ದು ಬಿಡೋಣ. ಕಾಲ ಕಳೀಲಿ. ಕೊನೆಗೆ ಉಳಿಯೋದು ನಮ್ಮ ಕೃತಿಯೋ, ಟೀಕಾಕಾರರ ಮಾತುಗಳೋ ನೋಡೋಣ. ಕಾಡಲ್ಲಿ ಸಿಂಹವೂ ಇರುತ್ತೆ, ನರಿಯೂ ಇರುತ್ತೆ. ಈಗಿನ ಕಾಲದ ನರಿಗಳು ತಾವೂ ಸಿಂಹ ಅಂತ ನಂಬಿಸೋ ದಕ್ಕೆ ಪ್ರಯತ್ನ ಪಡ್ತಿವೆ ಪಾಪ. ಆದರೆ ಕಾಲಾಂತರದಲ್ಲಿ ನಿಲ್ಲೋದು ಅದೇ ಹಳೇ ನಿಯಮವೇ.

‘ಎಷ್ಟು ಕತೆಗಳನ್ನು ಕೇಳಿಲ್ಲ ಹೇಳಿ ನೀವು? ಎಲ್ಲ ಕತೆಗಳೂ ಹೀಗೇ ಶುರುವಾಗೋದು: ಒಂದಾನೊಂದು ಕಾಲದಲ್ಲಿ ದೊಡ್ಡದೊಂದು ಕಾಡಿನಲ್ಲಿ ಒಂದು ಸಿಂಹ ಇತ್ತು… ಇದು ಬಿಟ್ಟು, ಒಂದಾನೊಂದು ಕಾಲದಲ್ಲಿ ದೊಡ್ಡ ಕಾಡಿನಲ್ಲಿ ಒಂದು ನರಿ ಇತ್ತು ಅಂತ ಶುರುವಾಗೋ ಕತೇನ ಯಾವತ್ತಾದ್ರೂ ಕೇಳಿದ್ದೀರಾ..’

Leave a Reply