The amount of water to make the bottle could be up to six or seven times what's inside the bottle, according to the Water Footprint Network.

ಬೆಂಗಳೂರು : ರಾಜ್ಯದಾದ್ಯಂತ ಇನ್ನು ಮುಂದೆ ಸರಕಾರಿ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವಂತಿಲ್ಲ. ಪರಿಸರ ಸಂರಕ್ಷಣೆ ದೃಷಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಸರಕಾರಿ ಇಲಾಖೆಗಳು, ನಿಗಮ ಮಂಡಳಿಗಳು,ವಿಶ್ವ ವಿದ್ಯಾಲಯ ,ಅನುದಾನಿತ ಸಂಸ್ಥೆಗಳು, ಹೀಗೆ ಅವು ಏರ್ಪಡಿಸುವ ಸಮಾರಂಭ ಸಭೆ, ಕಾರ್ಯಾಗಾರ, ಸೆಮಿನಾರ್ ಇತ್ಯಾದಿಗಳಲ್ಲಿ ೨೦ ಲೀಟರ್ ಅಥವಾ ಅದಕ್ಕಿಂತ ದೊಡ್ಡ ಕ್ಯಾನ್ ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಮಾಡಬೇಕು ಎಂದು ಆದೇಶಿಸಲಾಗಿದೆ.

ಕಚೇರಿಗಳಲ್ಲಿ ಸಭೆ ಸಮಾರಂಭಗಳು ಏರ್ಪಡುವ ಸಮಿತಿ ಕೊಠಡಿಗಳು ಇತ್ಯಾದಿ ಸಭಾಂಗಣದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಂಗೀಕರಿಸಿದ ಸಂಸ್ಥೆಗಳಿಂದ ಖರೀದಿಸಿದ ಆರ್ ಓ ಮತ್ತು ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗಾಜು ಸ್ಟೀಲ್ ಪೇಪರ್ ಅಥವಾ ಇತರೆ ಪಾಸ್ಟಿಕೇತರ ಲೋಟಗಳಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಬೇಕು ಎಂದು ಆದೇಶಿಸಲಾಗಿದೆ.

ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಬಾಟಲಿ ಎಲ್ಲೆಂದರೆಲ್ಲಿ ಎಸೆದು ಘಾನ ತ್ಯಾಜ್ಯ ಹೆಚ್ಚಿ ಪರಿಸರ ಮಾಲಿನ್ಯವುಂಟಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಮಾತ್ರವಲ್ಲ ಬಾಟಲಿ ನೀರು ಹೆಚ್ಚು ವ್ಯರ್ಥ ಆಗಿ ಸರಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಹೇಳಲಾಗಿದೆ.

Leave a Reply