ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ಭಾವ ಚಿತ್ರಗಳನ್ನು ಟ್ವಿಟರ್ ಮೂಲಕ ಶೇರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಸಹಯಾತ್ರಿಕರೂ ಪ್ರವಾಸದ ಫೋಟೋ ಮತ್ತು ಮಾಹಿತಿಗಳನ್ನು ಶೇರ್ ಮಾಡುತ್ತಿದ್ದಾರೆ.

ದೇಶದ ಅತ್ಯಂತ ಪ್ರಭಾವಿ ರಾಜಕಾರಣಿಗಳಲ್ಲೋರ್ವರಾದ ರಾಹುಲ್ ಗಾಂಧಿ, ಕಾವಲು ಪಡೆಯ ನೆರವನ್ನು ನಿರಾಕರಿಸಿದ್ದಾರೆ. ತಾನೊಬ್ಬ ಶಿವಭಕ್ತ ಎಂದು ಕರೆದು ಕೊಳ್ಳುವ ರಾಹುಲ್ ಶಿವ ವಿಶ್ವರೂಪಿ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಹಿತಿ ಪ್ರಕಾರ ರಾಹುಲ್ ಗುರುವಾರ 13 ತಾಸು ಕಾಲ ಪರ್ವತವನ್ನು ಏರಿ 34 ಕಿ.ಮೀ ದೂರ ಕ್ರಮಿಸಿದ್ದಾರೆ. ಕುದುರೆ ಸವಾರಿ ಬದಲಿಗೆ ರಾಹುಲ್ ಕಾಲ್ನಡಿಗೆಯಲ್ಲೇ ಮುಂದೆ ಸಾಗುತ್ತಿದ್ದಾರೆ.

ಇಲ್ಲಿ ಯಾವುದೇ ದ್ವೇಷವಿಲ್ಲ.. ಇದು ನಾವು ದೇಶದಲ್ಲಿ ಪೂಜಿಸುವ ವಿಧಾನವಾಗಿದೆ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ

Leave a Reply