ಬೇಕಾಗುವ ಸಾಮಗ್ರಿ:
ತೆಂಗಿನ ಕಾಯಿ ತುರಿದದ್ದು- ಮೂರುವರೆ ಕಪ್, ಸಕ್ಕರೆ – ಒಂದುವರೆ ಕಪ್, ಹಾಲಿನ ಹುಡಿ – ಒಂದುವರೆ ಕಪ್, ಗೋಡಂಬಿ – ಒಂದುವರೆ ಕಪ್, ಖರ್ಜೂರ – ಒಂದುವರೆ ಕಪ್, ಹಾಲು – ಅರ್ಧ ಕಪ್, ಕಲರ್ (ಹಳದಿ) – ಅಗತ್ಯಕ್ಕೆ, ಉಪ್ಪು – ಅಗತ್ಯಕ್ಕೆ
ತಯಾರಿಸುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಕತ್ತರಿಸಿದ ಗೋಡಂಬಿ, ಖರ್ಜೂರವನ್ನು ಸ್ವಲ್ಪ ಹುರಿದು ತೆಗೆಯಿರಿ. ಇನ್ನೊಂದು ಪಾತ್ರೆಯಲ್ಲಿ ತೆಂಗಿನ ತುರಿ, ಸಕ್ಕರೆ, ಕಲರ್ ಮತ್ತು ಹಾಲು ಹಾಕಿ ಸಣ್ಣ ಉರಿಯಲ್ಲಿಡಿ. ಸಕ್ಕರೆ ಕರಗುತ್ತಾ ಬರುವಾಗ ಅದಕ್ಕೆ ಮೊದಲು ಹುರಿದಿದ್ದ ಗೋಡಂಬಿ ಮತ್ತು ಖರ್ಜೂರ ವನ್ನು ಮಿಕ್ಸ್ ಮಾಡಿ.
ತೆಂಗಿನ ತುರಿ ಚೆನ್ನಾಗಿ ಪಾಕ ವಾಗುತ್ತಾ ಬಂದಾಗ ಹಾಲಿನ ಹುಡಿ ಸ್ವಲ್ಪ ಸ್ವಲ್ಪನೇ ಹಾಕಿ ಕೈಯಾಡಿಸುತ್ತಾ ಇರ ಬೇಕು. ಅದು ಪಾತ್ರೆಯನ್ನು ಬಿಟ್ಟು ಬರು ವಾಗ ಬಾಳೆ ಎಲೆಯ ಮೇಲೋ ಅಥವಾ ಅಲ್ಯೂಮಿನಿಯಂ ಪಾತ್ರೆಗೆ ಸುರಿಯಿರಿ. ಬಿಸಿ ಆರಿದ ಬಳಿಕ ತಮ್ಮಿಷ್ಟದ ಆಕೃತಿಗೆ ಕತ್ತರಿಸಿ.
-ಸಾಂದರ್ಭಿಕ ಚಿತ್ರ-