ವಾಶಿಂಗ್ಟನ್: ಅನಧಿಕೃತ ವಲಸಿಗರ ವಿರುದ್ಧ ಹರಿ ಹಾಯ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಗ್ಯತೆ ಇದ್ದವರು ಮಾತ್ರ ಅಮೆರಿಕಕ್ಕೆ ಬನ್ನಿ ಎಂದು ಹೇಳಿದ್ದಾರೆ. ಅನಧಿಕೃತ ರೀತಿಯಲ್ಲಿ ನುಸುಳುವುದನ್ನು ನಾವು ಸಹಿಸುವುದಿಲ್ಲ. ಯೋಗ್ಯತೆ ಇರುವವರು ಮತ್ತು ಸಹಾಯ ಮಾಡಲು ಸಮರ್ಥರು ದೇಶಕ್ಕೆ ಬನ್ನಿ. ನಾನು ಗಡಿಯ ವಿಚಾರದಲ್ಲಿ ತೀರ ಕಟ್ಟುನಿಟ್ಟಿನ ವ್ಯಕ್ತಿ ಎಂದು ಹೇಳಿದ್ದಾರೆ. ಜನರು ಕಾನೂನಿನ ಪ್ರಕಾರ ಅಮೆರಿಕಕ್ಕೆ ಬರಬಹುದು. ಅಕ್ರಮ ರೀತಿಯಲ್ಲಿ ಅಲ್ಲ. ಅಮೆರಿಕಕ್ಕೆ ಬರುವುದಕ್ಕೆ ಜನರು ಅರ್ಹರಾಗಿರಬೇಕೆಂದು ತಾನು ಬಯಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದರು.

ಅನಧಿಕೃತ ವಲಸೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಅವರು ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.ಇಂತಹ ಹೆಜ್ಜೆಯಲ್ಲಿ ಭಾರತದಂತ ದೇಶಗಳ ಅನಿವಾಸಿಗಳಿಗೆ ಸಹಾಯವಾಗಲಿದೆ ಎಂದ ಅವರು ತನ್ನ ದೇಶಕ್ಕೆ ಉತ್ಕೃಷ್ಟ ದರ್ಜೆಯ ಕಾರು ಕಂಪೆನಿಗಳು ಬರುತ್ತಿವೆ. ಕಳೆದ 35 ವರ್ಷಗಳಲ್ಲಿ ಹೀಗೆ ನಡೆದಿಲ್ಲ. ಫಾಕ್ಸ್‍ಕಾನ್‍ನಂತಹ ಕಂಪೆನಿಗಳು, ಬರುತ್ತಿವೆ. ಹೀಗೆ ಯೋಗ್ಯ ಜನರಿಗೆ ಸ್ವಾಗತವಿದೆ. ತಮ್ಮ ಯೋಗ್ಯತೆಯ ಆಧಾರದಲ್ಲಿ ಅವರು ಬರಬೇಕು. ಇಂತಹ ಜನರು ನಮ್ಮ ದೇಶಕ್ಕೆ ಸಹಾಯ ಮಾಡಬಲ್ಲರು. ಇದು ಬಹಳ ಮಹತ್ವಪೂರ್ಣ ವಿಷಯ ಎಂದು ಟ್ರಂಪ್ ಹೇಳಿದ್ದಾರೆ.

Leave a Reply