ಮುಂಬೈ: ಬಾಲಿವುಡ್‍ನಲ್ಲಿ ಮೀಟೂ ಅಭಿಯಾನ ತೀವ್ರ ತೆರನಾಗಿ ಜಾರಿಯಲ್ಲಿದೆ. ನಟಿ ಮಣಿಗಳೆಲ್ಲ ತಮಗಾದ ಕೆಟ್ಟ ಅನುಭವಗಳ ಸರಮಾಲೆಯನ್ನೆ ಬಿಡಿಸಿಡುತ್ತಿದ್ದಾರೆ. ಮೀಟೂ ಮೂಲಕ ಮಹಿಳಾ ಸಮಾನತೆಯ ಕೂಗು ಕೇಳಿಸುತ್ತಿದೆ.

ಈಗ ನಟ ಶೇಖರ್ ಸುಮನ್ ಪುತ್ರ ಅಧ್ಯಯನ್ ಸುಮನ್ ಟ್ವಿಟರ್‍ನಲ್ಲಿ ಕಂಗನಾರಿಂದ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡು ದುಃಖ ತೋಡಿಕೊಂಡಿದ್ದಾರೆ. ಅಧ್ಯಯನ್ ಕಂಗನಾರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸರಣಿ ಟ್ವೀಟ್ ಮಾಡಿ ಅಚ್ಚರಿ ಸೃಷ್ಟಿಸಿದ್ದಾರೆ.

ಇನ್ನೊಂದು ಕಡೆ ಕಂಗಾನ ಮೀಟೂನಲ್ಲಿ ವಿಕಾಸ್ ಬಹಲ್ ವಿರುದ್ಧ ಹಲವು ಆರೋಪ ಹೊರಿಸುತ್ತಲೇ ಇದ್ದಾರೆ.ಇದೀಗ ಅವರು ಕೂಡ ಆರೋಪಿಯ ಸ್ಥಾನದಲ್ಲಿ ನಿಲ್ಲುವ ಅವಸ್ಥೆ ಎದುರಾಗಿದೆ.

ಅಧ್ಯಯನ್ ಟ್ವೀಟ್ ಮಾಡುತ್ತಾ ಬಹಳಷ್ಟು ಜನರು ನನ್ನೊಡನೆ ನನ್ನ ಮೀಟು ಕಥೆಯನ್ನು ಹೇಳಲು ಒತ್ತಾಯಿಸುತ್ತಿದ್ದಾರೆ. ಕ್ಷಮಿಸಿ ಎರಡು ವರ್ಷದ ಹಿಂದೆ ನನಗೆ ಅಪಮಾನ ಮತ್ತು ನಾಚಿಕೆ ಪಡುವಂತಾಗಿತ್ತು. ನನ್ನ ತಂದೆ ತಾಯಿಯನ್ನು ತುಂಬ ಪ್ರೀತಿಸುತ್ತೇನೆ. ನ್ಯಾಶನಲ್ ಟಿವಿಯಲ್ಲಿ ಅವರ ವಿರುದ್ಧ ಅಶ್ಲೀಲ ಕಮೆಂಟು ಮಾಡಲಾಗುತ್ತಿದೆ.

ಜತೆಗೆ ಅಧ್ಯಯನ್ ಹೀಗೆ ಹೇಳಿದ್ದಾರೆ” ನಿಮಗೆ ನಿಮ್ಮ ನೋವನ್ನು ಮತ್ತು ಕೆಟ್ಟ ಅನುಭವಗಳನ್ನು ಬಹಿರಂಗಪಡಿಸುವ ಹಕ್ಕುಇದೆ. ಯಾರು ನನ್ನನ್ನು ಬೆಂಬಲಿಸಿದ್ದಾರೆ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ”

2016ರಲ್ಲಿ ಕಂಗನಾ ತನಗೆ ಹೊಡೆದಿದ್ದಾರೆ ಎಂದು ಅಧ್ಯಯನ್ ಹೇಳಿದ್ದಾರೆ. ಎಲ್ಲರ ಮುಂದೆ ಅಪಮಾನಿಸುತ್ತಿದ್ದರು. ಕಾಲಾ ಜಾದೂ ಮಾಡುತ್ತಿದ್ದರು. ಒಂದು ಸಲ ಹೃತಿಕ್ ರೋಶನ್‍ರ ಹುಟ್ಟುಹಬ್ಬದಲ್ಲಿ ಕಂಗನಾ ತನ್ನ ಕೆನ್ನೆಗೆ ಹೊಡೆದು, ನಿಂದಿಸಿದ್ದರು ಎಂದು ಹೇಳಿದ್ದಾರೆ. ಅಧ್ಯಯನ್ ಸುಮನ್ ರಾಜ್-2ರಲ್ಲಿ ಕಂಗನಾ ಜೊತೆ ನಟಿಸಿದ್ದರು. ನಂತರ ಅಧ್ಯಯನ್ ವಿದೇಶಕ್ಕೆ ಹೋಗಿದ್ದರು.ಅಧ್ಯಯನ್‍ರ ಟ್ವೀಟ್‍ನ ಕುರಿತು ಕಂಗನಾರನ್ನು ಕೇಳಿದಾಗ ಕಂಗನಾ ನಗುತ್ತಾ ಅಧ್ಯಯನ್‍ಗೆ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.

Leave a Reply