ರಾಯ್ಪುರ್ : ಛತ್ತೀಸ್ ಗಢದ ಕಾಂಗ್ರೆಸ್ ಶಾಸಕರ ವಿಡಿಯೋವೊಂದು ವೈರಲ್ ಆಗಿದೆ. ಸಾರ್ವಜನಿಕ ಸಭೆಯಲ್ಲಿ ಕಲುಷಿತ ನೀರು ಕುಡಿದು ಅಧಿಕಾರಿಗಳಿಗೂ ಅದೇ ಕಲುಷಿತ ನೀರಿನ ರುಚಿ ಸವಿಯುವಂತೆ ಮಾಡಿದ್ದಾರೆ.


ಏನಿದು ವಿಷಯ :

ಬಸ್ತರ್ ಜಿಲ್ಲೆಯ ಚಿಂದ್ವಾರ ಜಿಲ್ಲೆಯ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದ್ದು, ಚಿತ್ರಕೋಟ ಶಾಸಕ ದೀಪಕ್ ಬೈಜ್ ಕಲುಷಿತ ನೀರನ್ನು ಕುಡಿದು ನಮ್ಮ ಜನರು ಇಂತಹ ನೀರನ್ನು ಸುಮಾರು ಆರು ವರ್ಷಗಳಿಂದ ಕುಡಿಯುತ್ತಿದ್ದಾರೆ. ನಾನೂ ಇದನ್ನು ಕುಡಿಯುತ್ತೇನೆ ನೀವು ಕುಡಿಯಿರಿ ಎಂದು ಅಧಿಕಾರಿಗಳಿಗೆ ಕುಡಿಸಿದರು. ಈ ನೀರಿನಲ್ಲಿ ಕಬ್ಬಿನಾಂಶ ಹೆಚ್ಚು ಇದೆ ಎಂದು ಮನಗಂಡು ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ದಾಖಲಿಸಿಕೊಂಡರು.

ಚಿಂದ್ವಾರ್ ಗ್ರಾಮದ ಜನರು ನೀರಿಗಾಗಿ ಬೋರನ್ನು ಅವಲಂಬಿಸಿದ್ದು, ಅದರಿಂದ ಕಬ್ಬಿನಾಂಶ ನೀರು ಬರುತ್ತದೆ. ಶುದ್ಧ ನೀರಿನ್ನು ಒದಗಿಸುವ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿ ಗಮನ ಸೆಳೆದಿದ್ದರು. ಆದರೆ ಅಧಿಕಾರಿಗಳು ಆ ಬಗ್ಗೆ ಗಮನ ಕೊಟ್ಟಿರಲಿಲ್ಲ. ಆದರೆ ಈಗ ಸ್ವತಃ ಶಾಸಕರೇ ಅದಕ್ಕೆ ಪರಿಹಾರ ಕಂಡು ಕೊಂಡಿದ್ದಾರೆ.

Leave a Reply