ಲಾಡ್ಜ್ ನ ರೂಮಿನ ಸೀಲಿಂಗ್ ಫ್ಯಾನ್ ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದಕ್ಕಾಗಿ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಖಂಡದ ನಯೀಟೆಹರಿ ಎಂಬಲ್ಲಿ ಈ ಘಟನೆ ನಡೆದಿದ್ದು, ದಂಪತಿಗಳು ಫ್ಯಾನ್ ನಲ್ಲಿ ಗುಪ್ತ ಕಾಮರಾ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಸೋಮವಾರ ರಾತ್ರಿ ತಮ್ಮ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ನಲ್ಲಿ ಜೋಡಿಸಲಾದ ಕ್ಯಾಮೆರಾವನ್ನು ಜೋಡಿ ಪತ್ತೆ ಮಾಡಿದ ಬಳಿಕ ಅವರು ರಿಸೆಪ್ಶನ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ಯಾರೂ ಅವರಿಗೆ ಗಮನ ಕೊಡಲಿಲ್ಲ ದಂಪತಿಗಳು ಬೆಳಗ್ಗಿನವರೆಗೆ ಕಾದು ಬಳಿಕ ಪೊಲೀಸರಿಗೆ ದೂರು ನೀಡಿದರು ಎಂದು ಚಂದನ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ದಂಪತಿಗಳ ಖಾಸಗಿತನವನ್ನು ಉಲ್ಲಂಘಿಸಲು ಯತ್ನಿಸುತ್ತಿದ್ದ ಕಾರಣ, ದಂಪತಿಗಳ ದೂರಿನ ಆಧಾರದ ಮೇರೆಗೆ ಹೋಟೆಲ್ನ ಮಾಲೀಕನನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು. ಹೋಟೆಲ್ ನಲ್ಲಿದ್ದ ಹಿಡೆನ್ ಕಾಮರಾ, ಮೊಬೈಲ್ ಫೋನ್, ಲ್ಯಾಪ್ ಟಾಪ್ ಗಳನ್ನೂ ಪೊಲೀಸರು ವಶ ಪಡಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply