ಸಾಂದರ್ಭಿಕ ಚಿತ್ರ

ದೆಹಲಿಯ ವಝೀರಾ ಬಾದ್‍ನ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಲ್ಲಿ ಹಿಂದೂ ಮುಸ್ಲಿಮ್ ಎಂದು ಪ್ರತ್ಯೇಕಿಸಿ ವಿವಿಧ ಕ್ಲಾಸ್ ರೂಮ್‍ಗಳಲ್ಲಿ ಕಲಿಸುತ್ತಿರುವ ಕುರಿತು ದೂರು ದಾಖಲಾಗಿದೆ.

ಪ್ರತೀ ತರಗತಿಯಲ್ಲಿ ಎಷ್ಟು ಮುಸ್ಲಿಮರು ಎಷ್ಟು ಹಿಂದೂಗಳಿದ್ದಾರೆಂದು ಲೆಕ್ಕಹಾಕಿ ವಿವಿಧ ಡಿವಿಜನ್ ಮಾಡಿದ್ದಾರೆ. ಒಂದನೇಯ ತರಗತಿಯ ಎ ವಿಭಾಗದಲ್ಲಿ 36 ಹಿಂದೂ ವಿದ್ಯಾರ್ಥಿಗಳಿದ್ದರೆ ಬಿ, ವಿಭಾಗದಲ್ಲಿ 36 ಮುಸ್ಲಿಮ್ ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ ಇತರ ತರಗತಿಗಳಲ್ಲಿಯೂ ವಿಭಜನೆ ಮಾಡಲಾಗಿದೆ.

ಘಟನೆ ವಿವಾದವಾಗುವುದನ್ನು ಅರಿತ ಶಾಲಾ ಪ್ರಾಂಶುಪಾಲರಾದ ಸಿ,ಬಿ. ಸಿಂಗ್ ಶೆರಾವತ್ ಪ್ರತಿಕ್ರಿಯಿಸುತ್ತಾ “ವಿದ್ಯಾರ್ಥಿಗಳ ನಡುವೆ ಸಮಸ್ಯೆಗಳು ಬರಬಾರದೆಂದು ಈ ರೀತಿ ಮಾಡಿದ್ದೇವೆಯೇ ಹೊರತು ಮಕ್ಕಳ ಮಧ್ಯೆ ಬಿರುಕುಂಟು ಮಾಡಲು ಅಲ್ಲವೆಂದೂ, ಇದು ಆಡಳಿತ ಮಂಡಳಿಯ ನಿರ್ಧಾರವಾಗಿದ್ದು, ಶಿಸ್ತು, ಶಾಂತಿ, ಉತ್ತಮ ಕಲಿಕೆಗೆ ಅವಕಾಶ ಮಾಡಿಕೊಡಲು ಈ ರೀತಿ ಮಾಡಲಾಗಿದೆಯೆಂದೂ ಅವರು ಹೇಳಿದರು.

ಆದರೆ ಹಳೆಯ ಪ್ರಾಂಶುಪಾಲರು ಹೋದಾಗ ಹಂಗಾಮಿಯಾಗಿ ಅಧಿಕಾರ ವಹಿಸಿಕೊಂಡ ಅಧ್ಯಾಪಕರು ಈ ರೀತಿ ಮಾಡಿದ್ದಾರೆಂಬ ಆರೋಪವಿದೆ.

Leave a Reply