ರಾಜ್ಯದಲ್ಲಿ ಇತ್ತೀಚಿಗೆ ನಡೆದ ರಾಜಕೀಯ ಬೆಳವಣೆಯಿಗೆ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಿಡಿಮಿಡಿಗೊಂಡಿದ್ದು, ಇದಕ್ಕೆ ಕಾರಣರಾದವರಿಗೆ ಕಡಿವಾಣ ಹಾಕದಿದ್ದಲ್ಲಿ ನಮ್ಮ ದಾರಿ ನೋಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಸರಕಾರ ನಡೆಸುವ ಉಭಯ ಪಕ್ಷಗಳಲ್ಲಿ ಸರಿ ಇಲ್ಲದಿದ್ದರೆ ಸರಕಾರಕ್ಕೆ ಉಳಿಗಾಲವಿಲ್ಲ. ಮುಂದೆ ಈಗಾಗದಂತೆ ಎಚ್ಚರಿಕೆ ವಹಿಸಿ, ಸರ್ಕಾರ ನಡೆಸಲು ಅಡ್ಡಗಾಲು ಹಾಕುವವರಿಗೆ ಕಡಿವಾಣ ಹಾಕದಿದ್ದರೆ ಏನು ಮಾಡಬೇಕೆಂದು ನಮಗೂ ಗೊತ್ತಿದೆ ಎಂದು ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರೊಂದಿಗೆ ಮಾತುಕತೆ ನಡೆಸಿ ಸಂದೇಶ ರವಾನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿಂದಲೇ ಒಂದು ರೀತಿಯಲ್ಲಿ ಕಿರುಕುಳ ಮುಂದುವರಿದಿದೆ. ಲೋಕ ಸಭೆ ಚುನಾವಣೆ ನಿಮ್ಮಷ್ಟು ನಮಗೂ ಮುಖ್ಯವಾಗಿದೆ. ರಾಜಕೀಯ ಮೇಲಾಟ ನಿಲ್ಲಿಸಿ ಸುಗಮವಾಗಿ ಸರಕಾರ ನಡೆಸಲು ಬಿಡಬೇಕು ಎಂದು ಹೇಳಿದ್ದಾರೆ.