ಪಾಲಕ್ಕಾಡ್: ಇಲ್ಲಿನ ಪೆರುವಂಬ ಸಿಐ ಹೈಯರ್‍ಸೆಕಂಡರಿ ಸ್ಕೂಲ್ ಜಪ್ತಿಯನ್ನು ವರದಿ ಮಾಡಲು ಹೋದ ಮೀಡಿಯವನ್ ವರದಿಗಾರರ ತಂಡಕ್ಕೆ ಶಾಲಾ ಮ್ಯಾನೇಜ್‍ಮೆಂಟಿನ ಜನರು ಹೊಡೆದಿದ್ದಾರೆ. ಮೀಡಿಯಾ ವನ್‍ ತಂಡದಲ್ಲಿದದ ಸಾಜಿದ್ ಅಜ್ಮಲ್, ವಸೀಂ ಮುಹಮ್ಮದ್ , ನಾಸರ್‍ಗೆ ಮ್ಯಾನೇಂಜ್‍ಮೆಂಟ್ ಪ್ರತಿನಿಧಿಗಳನ್ನೊಳಗೊಂಡ ಅಕ್ರಮಿಗಳು ಥಳಿಸಿದ್ದಾರೆ.

ಅಧ್ಯಾಪಕ ನೇಮಕಾತಿಗೆ ಹಣ ಪಡೆದು ನೇಮಕಾತಿ ನಡೆಸಲಿಲ್ಲ ಎನ್ನುವ ದೂರಿನಲ್ಲಿ ಜಪ್ತಿ ಆದೇಶ ಹೊರಬಿದ್ದಿತ್ತು. ಇತ್ತೀಚೆಗೆ ಕೇರಳದಲ್ಲಿ ಪತ್ರಕರ್ತರ ಮೇಲೆ ಹಲ್ಲೆಯೆಸಗುವ ಘಟನೆಗಳು ವಿಪರೀತವಾಗಿದ್ದು, ಮಾತೃಭೂಮಿ ಪತ್ರಿಕೆಯ ವರದಿಗಾರಿಗೂ ಹಲ್ಲೆ ನಡೆಸಿಸಿದ್ದು ಇತ್ತೀಚೆಗೆ ವರದಿಯಾಗಿತ್ತು.

Leave a Reply