Photo: PTI/Representational image

ಮೈಸೂರು: ಚುನಾವಣೆಯಲ್ಲಿ ಬಳಕೆಯಾಗುವ ಅಳಿಸಲಾಗದ ಇಂಕ್ ಅನ್ನು ಸುಲಭವಾಗಿ ಅಳಿಸಬಹುದಾಗಿದೆ ಎಂದು ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಚುನಾವಣಾ ಆಯೋಗಕ್ಕೆ 30 ಲಕ್ಷಕ್ಕೂ ಅಧಿಕ ಬಾಟಲ್‌ಗಳಲ್ಲಿ ಇಂತಹ ಇಂಕ್ ಸರಬರಾಜು ಮಾಡಿರುವ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ, ನಾವು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪತ್ರಿಕೆಗೆ ಪ್ರತಿಕ್ರಿಯಿಸಿದ ಸಂಸ್ಥೆಯ ವ್ಯವಸ್ಥಾಪಕ ನಿದೇರ್ಶಕ ದೊಡ್ಡಮನಿ ನಾವು ಗುಣಮಟ್ಟ ಕಾಪಾಡಿಕೊಂಡಿರುವ ಉತ್ಪನ್ನವನ್ನೇ ಸರಬರಾಜು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಕೆಲವರು ಇಂತಹ ಸುದ್ದಿ ಹರಿಯಬಿಟ್ಟಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಈ ಬಗ್ಗೆ ನಮ್ಮನ್ನು ಚುನಾವಣಾ ಆಯೋಗ ಸೇರಿದಂತೆ ಇನ್ನಾವುದೇ ಉನ್ನತ ಸಂಸ್ಥೆಯವರು ಪ್ರಶ್ನಿಸಿ ನಮ್ಮಿಂದ ಮಾಹಿತಿ ಕೇಳಿಲ್ಲ ಎಂದರು.

Leave a Reply