ಹೊಸದಿಲ್ಲಿ: ಗುರುಗ್ರಾಮದ ಇಲೆಕ್ಟ್ರಿಕ್ ಟು ವೀಲರ್ ನಿರ್ಮಾಣ ಕಂಪೆನಿ ಒಕಿನೊವಾ ಸ್ಕೂಟಿ ಭಾರತದಲ್ಲಿ ತನ್ನ ಲೆಟೆಸ್ಟ್ ಇಲಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ್ದು, ಒಮ್ಮೆ ಚಾರ್ಜು ಮಾಡಿದರೆ 120 ಕಿಲೋಮೀಟರ್ ಓಡುತ್ತದೆ. ಇದರಲ್ಲಿ 800 ವಾಟ್‍ನ ಬಿಎಲ್‍ಡಿಸಿ ಮೊಟಾರ್ ಇದೆ. ಇದು ವಾಟರ್‍ಫ್ರೂಫ್ ಕೂಡಾ ಆಗಿದೆ.ಲಿಥಿಯಮ್ ಅಯನ್ ಬ್ಯಾಟರಿ ಇದೆ. ಇದು ಸ್ಪೀಡನ್ನು ಖಚಿತಪಡಿಸುತ್ತದೆ. ಇಲೆಕ್ಟ್ರಿಕ್ ಸ್ಕೂಟರ್‍ನ ಬೆಲೆ ಹೆಚ್ಚಿಲ್ಲ 64,988ರೂಪಾಯಿ ಆಗಿದೆ.

ಲೂಸೆಂಟ್ ಆರೆಂಜ್, ಮೆರೆನಾ ಗ್ರೆ ಮತ್ತು ಮಿಡ್ ನೈಟ್ ಬ್ಲೂ ಕಲರ್‍ನಲ್ಲಿ ಸ್ಕೂಟರ್ ಸಿಗುತ್ತಿದ್ದು, ಇದು 55 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ ಎಂದು ಕಂಪೆನಿ ಹೇಳುತ್ತದೆ. ಇದರ ಹ್ಯಾಂಡಲಿಂಗ್ ಸುಲಭವಾಗಿದ್ದುನಗರ ಪ್ರದೇಶದಲ್ಲಿ ಚಲಾಯಿಸಲು ಅನುವಾಗುವಂತೆ ತಯಾರಿಸಲಾಗಿದೆ.

150 ಕಿಲೋ ಭಾರವನ್ನು ಹೊರಲಿದೆ. ಆದ್ದರಿಂದ ಇದರಲ್ಲಿ ಇಬ್ಬರು ಬಹಳ ಆರಾಮವಾಗಿ ಪ್ರಯಾಣಿಸಬಹುದು. ಈ ಸ್ಕೂಟರ್ ತಯಾರಿಸುವಾಗ ಸೇಫ್ಟಿ ಪೀಚರ್ಸ್‍ನತ್ತ ಕೂಡ ಗಮನಹರಿಸಲಾಗಿದೆ. ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಇದೆ.ಎಂಟಿ ಥೆಪ್ಟಿ ಸಿಸ್ಟಮ್ ಮತ್ತು ಕಿಲೈಸ್ ಎಂಟ್ರಿಯಂತಹ ಹಲವು ಫೀಚರ್ಸ್‍ಗಳಿವೆ. ಡ್ರಮ್ ಬ್ರೇಕ್ ಇದೆ.

ಒಕಿನೊವಾ ಸ್ಕೂಟರ್ ರಿಡ್ಜ್ ಮತ್ತು ಪ್ರೈಸ್‍ಗೆ ಸಿಗುತ್ತಿರುವ ಧನಾತ್ಮಕ ಪ್ರತಿಕ್ರಿಯೆಯಲ್ಲಿ ರಿಡ್ಜ್ ಇಲೆಕ್ಟ್ರಿಕ್ ಸ್ಕೂಟರ್ ತರಲಾಗಿದೆ.ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟು ಈ ಸ್ಕೂಟರ್ ತಯಾರಾಗಿದೆ.ಪೆಟ್ರೋಲಿನಿಂದ ಹೋಗುವ ಸ್ಕೂಟರಿಗಿಂತಲೂ ತುಂಬ ಉತ್ತಮವಾಗಿದೆ ಎಂದು ಒಕಿನೊವಾದ ಮ್ಯಾನೇಜಿಂಗ್ ಡೈರೆಕ್ಟರ್ ಜಿತೇಂದ್ರ ವರ್ಮಾ ಹೇಳಿದರು.

Leave a Reply