ಕೊಚ್ಚಿ: ಸರಕಾರಿ ಇಲಾಖೆಗಳ ನಡುವಿನ ಅವಾಂತರಕ್ಕೆ ಕೇಳದಲ್ಲಿ ನಡೆದ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದ್ದು, ಆತಿಕಾ ಮರಿಯಂ ಎನ್ನುವ ಮಹಿಳೆ ಹೈಕೋರ್ಟಿನ ಮೆಟ್ಟಿಲೇರಿದ್ದಾರೆ. ಆತಿಕಾ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾಕಿಸಿದ್ದಾರೆ ಎಂದು ಅರಣ್ಯ ಇಲಾಖೆ ಹಾಕಿದ ಕೇಸು ತೆರವಿಗೆ ಅವರು ಹೈಕೋರ್ಟಿನಲ್ಲಿ ಅರ್ಜಿಸಲ್ಲಿಸಿದ್ದು, ವಿಚಾರಣೆಗೆತ್ತಿಕೊಂಡ ಹೈಕೋರ್ಟಿನ ಏಕಸದಸ್ಯ ಪೀಠ ಅಧಿಕಾರಿಗಳಿಂದ ವಿವರಣೆ ಬಯಸಿದೆ.

ಘಟನೆ ಹೀಗಿದೆ-

ಆತಿಕಾ ಜಿಲ್ಲಾಧಿಕಾರಿಗಳಿಗೆ ತನ್ನ ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು. ನಂತರ ಜಿಲ್ಲಾಧಿಕಾರಿ ಆದೇಶ ಪ್ರಕಾರ ಕೆಎಸ್‍ಬಿ ವಿದ್ಯುತ್ ಕಂಬ ಹಾಕಿ ಅವರ ಮನೆಗೆ ವಿದ್ಯುತ್ ಒದಗಿಸಿತ್ತು. ಆವರೆಗೂ ಸುಮ್ಮನಿದ್ದ ಅರಣ್ಯ ಇಲಾಖೆ ಮಹಿಳೆಯ ವಿರುದ್ಧ ಕೇಸು ದಾಖಲಿಸಿತು. ಆತಿಕಾ ಅರ್ಜಿಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟು ಪೀಠ ವಿದ್ಯುತ್ ಸಂಪರ್ಕ ಮಾಡಿಸಿದ್ದಕ್ಕಾಗಿ ಓರ್ವ ಮಹಿಳೆಯನ್ನು ಆರೋಪಿ ಸ್ಥಾನದಲ್ಲಿರಿಸುವುದು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದೆ. ಆದ್ದರಿಂದ ಕೂಡಲೇ ಘಟನೆಗೆಸಂಬಂಧಿಸಿದ ಅಧಿಕಾರಿಗಳನ್ನು ಪ್ರಕರಣದಲ್ಲಿ ಕಕ್ಷಿಸೇರಿಸುವಂತೆ ಕೋರ್ಟಿನ ರಿಜಿಸ್ಟ್ರಾರ್‍ಗೆ ಆದೇಶಿಸಿದ್ದು ಜತೆಗೆ ಪ್ರಕರಣದಲ್ಲಿ ವಯನಾಡ್ ಜಿಲ್ಲಾಧಿಕಾರಿ, ವಿಭಾಗಿಯ ಅರಣ್ಯಾಧಿಕಾರಿ ಅಧಿಕಾರಿ, ಕೆಎಸ್‍ಇಬಿ ವಯನಾಡ್ ಡಿವಿಜನ್, ಇಂಜಿನಿಯರ್, ಅರಣ್ಯ ಇಲಾಖೆ ಕಾರ್ಯದರ್ಶಿಯಿಂದ ಕೋರ್ಟು ವಿವರಣೆ ಕೇಳಿದೆ.

ಅರಣ್ಯದ ಮೂಲಕ ಅನಧಿಕೃತವಾಗಿ ವಿದ್ಯುತ್ ಲೈನ್ ಎಳೆಯಲಾಗಿದೆ ಎಂದು ಮಹಿಳೆಯ ವಿರುದ್ಧ ಅರಣ್ಯ ಇಲಾಖೆ ಆರೋಪ ಹೊರಿಸಿದ್ದರೆ ಮಹಿಳೆ ತನ್ನವಿರುದ್ಧ ಅನವಶ್ಯಕವಾಗಿ ಕೇಸುದಾಖಲಿಸಲಾಗಿದ್ದು ಕೇಸನ್ನು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.ಫಾರೆಸ್ಟ್ ಅಧಿಕಾರಿ ಅಫಿದಾವಿತ್ ಸಲ್ಲಿಸಿ ಕೋರ್ಟಿಗೆ ವಿವರಣೆ ನೀಡಿದರೂ ಕೋರ್ಟು ಹೆಚ್ಚಿನ ವಿವರಣೆಯನ್ನು ಬಯಸಿದೆ. ಅರ್ಜಿದಾರೆಯ ವಿರುದ್ಧ ಕ್ರಮಕ್ಕೆ ಅಗತ್ಯವಾದ ಸಮರ್ಥನೆಗಳು ಅಫಿದಾವಿತ್‍ನಲ್ಲಿಲ್ಲ ಎಂದು ಕೋರ್ಟು ಹೇಳಿತು.

ವಿದ್ಯುತ್ ಲೈನ್ ಎಳೆದು ಸಂಪರ್ಕಕಲ್ಪಿಸಿದರೆ ಅದು ಮಹಿಳೆಯು ಅಪರಾಧಿಯಾಗುವುದು ಎಂದು ಕೋರ್ಟು ಅಧಿಕಾರಿಗಳನ್ನು ಅಚ್ಚರಿಯಿಂದ ಪ್ರಶ್ನಿಸಿದೆ. ಕೋರ್ಟಿನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 23ರಂದು ನಡೆಯಲಿದೆ. ಮಹಿಳೆಯೊಬ್ಬರು ಸರಕಾರಿ ಅಧಿಕಾರಿಗಳ ಇಂಥ ಎಡವಿಟ್ಟಿನಿಂದಾಗಿ ಕೋರ್ಟಿಗೆ ಅಲೆದಾಡುವಂತಾಗಿದೆ.

Leave a Reply