ಮಹಾನಗರಗಳ ಮಕ್ಕಳದ್ದು ದೂರದ ಮಾತು, ಈಗೀಗ ಪಟ್ಟಣ ಪ್ರದೇಶಗಳಲ್ಲೂ ಮಕ್ಕಳು ಹೊರಗೆ ಬಿಸಿಲಿನಲ್ಲಿ ಆಡುವುದು ಬಹಳ ಕಮ್ಮಿ ಎಂದೇ ಹೇಳಬೇಕು.

ಶಾಲೆಗಳಲ್ಲಿ ಹೊರಗೆ ಆಡಲು ಬಿಡುವುದಿಲ್ಲ. ಮನೆಗೆ ಬಂದ ಮೇಲೆ ಹೋಂವರ್ಕ್ ಮಾಡಿ ಮುಗಿಯುವುದಿಲ್ಲ. ರಜಾ ದಿನ ಗಳಲ್ಲಿ ಟಿ.ವಿ., ವೀಡಿಯೋ ಗೇಮ್ಸ್ ಎಂದು ಮಕ್ಕಳು ಹೊರಗೆ ಹೋಗು ವುದೇ ಇಲ್ಲ…

ಇದೇ ರೀತಿ ಪರಿಸ್ಥಿತಿ ಇರುವ ಕಾರಣ, ಸೂರ್ಯನ ಬೆಳಕು ಮಕ್ಕಳ ಮೇಲೆ ಬೀಳದೇ ಇಂದಿನ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ವಿಪರೀತ ಪ್ರಮಾಣದಲ್ಲಿ ಏರುತ್ತಿದೆ ಎಂದು ಅಧ್ಯಯನ ವರದಿ ಬಹಿರಂಗ ಪಡಿಸಿದೆ. ಈ ಐದು ದಶಕಗಳಿಗೆ ಹೋಲಿಸಿದಾಗ ಕಣ್ಣಿನ ಸಮಸ್ಯೆ ಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣ ಇತ್ತೀಚೆಗೆ ದುಪ್ಪಟ್ಟಾಗಿದೆ ಯಂತೆ. ಅದರಲ್ಲಿಯೂ ಸಮೀಪ ದೃಷ್ಟಿ ದೋಷದಿಂದ ಅನೇಕ ಮಕ್ಕಳು ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.

ಈ ಅಧ್ಯಯನವನ್ನು ನಡೆಸಿರು ವುದು ಅಮೇರಿಕದ ತಜ್ಞರು. ಅಲ್ಲಿ, ಕೂಡ ಮಕ್ಕಳು ಮನೆಯ ಒಳ ಗೆಯೇ ತೊಡಗಿಸಿಕೊಳ್ಳುವ ಕಾರಣ (ವೀಡಿಯೋ ಗೇಮ್, ಕಂಪ್ಯೂಟರ್, ಟಿ.ವಿ. ಇತ್ಯಾದಿ) ಸೂರ್ಯನ ಬೆಳಕಿನಲ್ಲಿ ಆಡುವ ಪ್ರಮಾಣ ತೀರಾ ಕಡಿಮೆಯಾಗಿದೆ. ಹೀಗಾಗಿ ನೈಸರ್ಗಿಕ ವಾಗಿರುವ ಬೆಳಕು ಮಕ್ಕಳ ಕಣ್ಣಿನ ಮೇಲೆ ಬೀಳದ ಕಾರಣ ಇಂಥ ದ್ದೊಂದು ಅಪಾಯಕಾರಿ ವಾತಾ ವರಣ ಸೃಷ್ಟಿಯಾಗಿದೆ. ಸಮೀಪದ ದೃಷ್ಟಿಯಿಂದಾಗಿ ಮಕ್ಕಳಿಗೆ ದೂರ ದಲ್ಲಿ ಇರುವ ಅಕ್ಷರಗಳು ಹಾಗೂ ವಸ್ತುಗಳು ಅಸ್ಪಷ್ಟವಾಗಿ ಕಾಣಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಅಮೇರಿಕದ ಮಟ್ಟಿಗೆ ಹೇಳುವು ದಾದರೆ ಐದರಲ್ಲಿ ಒಂದು ಮಗು ಕಣ್ಣಿನ ಸಮಸ್ಯೆಯಿಂದ ಕನ್ನಡಕ ಹಾಕಿಕೊಳ್ಳುವ ಪರಿಸ್ಥಿತಿ ಉಂಟಾಗಿದೆಯಂತೆ. ಅಲ್ಸಟರ್ ವಿಶ್ವವಿದ್ಯಾಲಯದ ತಜ್ಞರು ಒಂದು ಸಾವಿರಕ್ಕೂ ಅಧಿಕ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಇಂಥದ್ದೊಂದು ವರದಿ ಯನ್ನು ಸಿದ್ಧಪಡಿಸಿದ್ದಾರೆ.

ಏನಿಲ್ಲವೆಂದರೂ, ಸೂರ್ಯನ ಬೆಳಕಿನಲ್ಲಿ ಕನಿಷ್ಠ ಒಂದು ತಾಸಾ ದರೂ ಮಕ್ಕಳು ಕಳೆಯಬೇಕು. ಇದ ರಿಂದ ಅವರ ದೃಷ್ಟಿ ಸಾಮರ್ಥ್ಯ ಹೆಚ್ಚುತ್ತದೆ ಎಂದಿದ್ದಾರೆ ಅಧ್ಯಯನದ ನೇತೃತ್ವ ವಹಿಸಿರುವ ಪ್ರೊ ಕ್ಯಾಟ್ರೀನ್ ಸೌಂಡರ್ಸ್.

ಅಮೇರಿಕದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದಾಗಿ ಸಮೀಪ ದೃಷ್ಟಿ ಸಮಸ್ಯೆಯಿಂದ ಬಳಲು ತ್ತಿರುವವರ ಪೈಕಿ ಶೇ. 16.4ರಷ್ಟು ಮಕ್ಕಳು 12-13 ವರ್ಷದವರಾದರೆ ಶೇ 18.6ರಷ್ಟು ಮಂದಿ 18-20 ವಯೋಮಾನದವರು. 60ರ ದಶಕ ದಲ್ಲಿ 12-21 ವಯಸ್ಸಿನ ಶೇ. 14.4 ಮಂದಿ ಮಾತ್ರ ಈ ಸಮಸ್ಯೆಯಿಂದ ಬಳಲುತ್ತಿದ್ದರು ಎಂದಿದ್ದಾರೆ ಪ್ರೆÇೀ. ಕ್ಯಾಟ್ರೀನ್. `ಈ ಸಮಸ್ಯೆ ವಿಶ್ವ ವ್ಯಾಪಿಯಾದುದು. ದಕ್ಷಿಣ ಕೊರಿಯಾ ದಲ್ಲಿ 19 ವರ್ಷ ವಯಸ್ಸಿನ ಶೇ.96.5 ಮಕ್ಕಳು, ಚೀನಾದಲ್ಲಿ ಶೇ.85ರಷ್ಟು ಮಕ್ಕಳು, ಆಸ್ಟ್ರೇಲಿಯಾದಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಇದೇ ಸಮಸ್ಯೆಯಿಂದ ಕನ್ನಡಕ ಧರಿಸ ಬೇಕಾಗಿದೆ’ ಎಂದಿದ್ದಾರೆ ಅವರು.

ಇದಕ್ಕೆ ಪರಿಹಾರ ಕಂಡು ಕೊಂಡಿರುವ ಚೀನಾದಲ್ಲಿ ತರಗತಿಯ ಒಳಗೂ ಸೂರ್ಯನ ಬೆಳಕು ಬೀಳುವ ಹಾಗೆ ಕಟ್ಟಡಗಳ ನಿರ್ಮಾಣ ವಾಗುತ್ತಿವೆ.
ಆಸ್ಟ್ರೇಲಿಯಾದ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕ ಅಧ್ಯಯ ನಕ್ಕೆ ಸೂರ್ಯನ ಬೆಳಕಿನ ಕೆಳಗೆ ಬಿಡಲಾಗುತ್ತಿದೆ.

Leave a Reply