ಚಿಕ್ಕಬಳ್ಳಾಪುರ: ಹೆತ್ತವರು ಪ್ರೀತಿಯಿಂದ ಸಾಕಿ ಸಲಹಿ ಬಳಿಕ ಮಗಳು ಯಾವುದೋ ಪ್ರಿಯಕರನ ಜೊತೆ ಪರಾರಿಯಾದರೆ ಹೆತ್ತವರಿಗೆ ಏನಾಗಬೇಡ. ಈ ಬಗ್ಗೆ ಯುವಕ ಯುವತಿಯರು ಆಲೋಚಿಸುವುದೇ ಇಲ್ಲ. ಮದುವೆ ನಿಶ್ಚಯವಾಗಿದ್ದ ಹುಡುಗಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ನೋಡ ಹೆತ್ತವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಚೌಡಮ್ಮ ಮತ್ತು ಚೌಡಪ್ಪ ದಂಪತಿ ನೇಣು ಬಿಗಿದು ಆತ್ಮಹತ್ಯಗೆ ಶರಣಾದ ದುರ್ದೈವಿಗಳು.

ಮಗಳು ಮಧುಶ್ರೀಗೆ ನಿಶ್ಚಿತಾರ್ಥವಾಗಿದ್ದು, ಹೆತ್ತ ತಂದೆ ತಾಯಿ ಮದುವೆಯ ತಯಾರಿಯ ಖುಷಿಯಲ್ಲಿದ್ದರು. ಆದರೆ ಕಳೆದೆರಡು ದಿನಗಳಿಂದ ಕಾಣೆಯಾದ ಮಗಳ ವಿಷಯ ತಿಳಿದು ಅವರು ಆಘಾತಗೊಂಡಿದ್ದಾರೆ. ಈ ದಂಪತಿಯ ದೊಡ್ಡ ಮಗಳೂ ಹೀಗೆಯೇ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಇದೀಗ ಈ ಮಗಳೂ ಹಾಗೆ ಮಾಡಿದ್ದರಿಂದ ಗ್ರಾಮದ ಹೊರವಲಯದ ಜಮೀನಿನಲ್ಲಿನ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದ ಈ ದಂಪತಿ ವೃತ್ತಿಯಲ್ಲಿ ನೇಕಾರರಾಗಿದದ್ದು, ಇವರು ಸ್ವಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿದ್ದಾರೆ.

Leave a Reply