Representational Imge

ಇನ್ನು ಮುಂದೆ ಖಾಸಗಿ ಶಾಲೆಗಳು ಮಕ್ಕಳಿಗೆ ಹೆಚ್ಚುವರಿ ಪುಸ್ತಕಗಳ ಹೊರೆಯನ್ನು ಹಾಕುವಂತಿಲ್ಲ. ಮಣಭಾರದ ಬ್ಯಾಗ್ ಹೊರುವುದಕ್ಕೆ ಸರ್ಕಾರ ಕಡಿವಾಣ ಹಾಕಲು ನಿರ್ಧರಿಸಿದೆ.

ಮಕ್ಕಳಿಗೆ ಜ್ಞಾನ ತುಂಬಲು ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಪುಸ್ತಕಗಳನ್ನು ನಿಗದಿ ಮಾಡಿದ್ದು ಇದರಿಂದ ಒಂದನೇ ತರಗತಿ ಮಕ್ಕಳು ಸುಮಾರು 10 ಕೆ.ಜಿ.ಯಷ್ಟು ಪುಸ್ತಕವನ್ನು ಬ್ಯಾಗ್‌ಗಳಲ್ಲಿ ಹಾಕಿ ಹೊರಬೇಕಾದ ಸ್ಥಿತಿ ಇದೆ. ಇದರಿಂದ ತರಗತಿ ಆಧಾರದ ಮೇಲೆ ಪುಸ್ತಕಗಳಿರುವ ಬ್ಯಾಗ್ ಇಂತಿಷ್ಟೆ ತೂಕ ಇರಬೇಕು ಎಂದು ಸೂಚಿಸಿ ಶಿಕ್ಷಣ ಇಲಾಖೆ ಮೂಲಕ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಮತ್ತು ಅನುದಾನಿತ, ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೆ ಶಾಲಾ ಬ್ಯಾಗ್ ತೂಕವನ್ನು ನಿಗದಿಪಡಿಸಿದ್ದು, ಅಷ್ಟೆ ತೂಕದ ಬ್ಯಾಗುಗಳನ್ನು ವಿದ್ಯಾರ್ಥಿಗಳು ಶಾಲೆಗೆ ತರಬೇಕಾಗಿದೆ. ಈ ಮುಂಚೆಯೂ ಹೊರಡಿಸಲಾಗಿತ್ತು. ಈಗ ನವೀಕರಿಸಿದ ಆದೇಶ ಹೊರಡಿಸಲಾಗಿದೆ. ಹೊಸ ಆದೇ ಶದ ಅನ್ವಯ ಮಕ್ಕಳ ತೂಕದ ಶೇ. 10 ಕ್ಕಿಂತಲೂ ಕಡಿಮೆ ತೂಕದ ಶಾಲಾ ಬ್ಯಾಗ್ ಅನ್ನು ವಿದ್ಯಾರ್ಥಿಗಳು ಶಾಲೆಗೆ ತರಬೇಕು ಎಂಬ ನಿಯಮ ರೂಪಿಸಲಾಗಿದೆ.

ಈ ನಿಯಮವು ಒಂದನೇ ತರಗತಿ ವಿದ್ಯಾರ್ಥಿಗಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಎಂದು ಸರ್ಕಾರದ ಶಾಲೆಗಳಿಗೆ ನಿರ್ದೇಶಿಸಿದೆ. ಒಂದನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕ 1.5 ಯಿಂದ 2 ಕೆ.ಜೆ., 3 ರಿಂದ 5 ನೇ ತರಗತಿವರೆಗಿನ ವಿದ್ಯಾರ್ಥಿಗಳ ಬ್ಯಾಗ್ ತೂಕ 2-3 ಕೆ.ಜಿ, 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ತೂಕ 3-4 ಕೆ.ಜಿ, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ತೂಕ 4-5 ಕೆ.ಜಿ ಮೀರಬಾರದು ಎಂದು ಇಲಾಖೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆ 

1. ಕ್ಷೇತ್ರ ಸಂಚಾರ
2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
3. ಗಣಿತ ವಿನೋದ, ಅಬ್ಯಾಸ


4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ


8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
11. ಹೊರಾಂಗಣ ಕ್ರೀಡೆಗಳು
12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.

Leave a Reply