ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ಹೊರಡಿಸಿದ್ದು, ‘ನಂಬರ್ ಒನ್ ಭ್ರಷ್ಟಾಚಾರಿ’ ಆಗಿ ನಿನ್ನ ತಂದೆಯ ಜೀವನಗೊಂಡಿತು ಎಂದು ರಾಹುಲ್ ಗಾಂಧಿಯನ್ನುದ್ದೇಶಿಸಿ ಟೀಕೆ ಮಾಡಿದ್ದರು. ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ಟ್ವೀಟ್ ಮೂಲಕ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.
“ಮೋದಿ ಜಿ, ಯುದ್ಧ ಮುಗಿದಿದೆ. ನಿಮ್ಮ ಕರ್ಮವು ನಿಮಗಾಗಿ ಕಾಯುತ್ತಿದೆ. ನನ್ನ ತಂದೆಯ ಬಗ್ಗೆ ನಿಮ್ಮ ಹೇಳಿಕೆ ಅದರಿಂದ ನಿಮ್ಮನ್ನು ರಕ್ಷಿಸುದಿಲ್ಲ. ನಿಮ್ಮ ಅಂತರಾಳ ನಿವೇನು ಎಂಬುದನ್ನು ತಿಳಿಸುತ್ತಿದೆ. ಪ್ರೀತಿ ಮತ್ತು ಅಪ್ಪುಗೆಯೊಂದಿಗೆ, ರಾಹುಲ್‌” ಟ್ವಿಟರ್‌ನಲ್ಲಿ ಉತ್ತರಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಪ್ರಧಾನಿ ಮೋದಿ ಮೇಲೆ ಕಿಡಿಕಾರಿದ್ದು, ”ಹುತಾತ್ಮರ ಹೆಸರಲ್ಲಿ ಮತ ಕೇಳುವ ಈ ದೇಶದ ಪ್ರಧಾನಮಂತ್ರಿ ಹುತಾತ್ಮರಾದ ಮತ್ತೊಬ್ಬ ಮೇರು ವ್ಯಕ್ತಿಯ ಬಗ್ಗೆ ಅವಹೇಳನ ಮಾಡಿದ್ದಾರೆ. ಪ್ರಾಮಾಣಿಕ ಹಾಗೂ ಪರಿಶುದ್ದ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಿಮಗೆ ಅಮೇಠಿಯ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮೋದಿಯವರೇ ನೆನಪಿರಲಿ ಈ ದೇಶದ ಜನರು ವಂಚನೆಯನ್ನು ಸಹಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ರ಼್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ತನ್ನ ವರ್ಚಸ್ಸು ಹಾಳು ಮಾಡಲು ಶ್ರಮಿಸುತ್ತಿದ್ದಾರೆಂದು ಆರೋಪಿಸಿದರು.
ನಿನ್ನ ತಂದೆಗೆ ‘ಮಿಸ್ಟರ್ ಕ್ಲಿನ್’ ಎಂದು ಹೇಳುತ್ತೀರಾ, ಆದರೆ ಅವರು ಭ್ರಷ್ಟಾಚಾರಿ ನಂಬರ್ ಒನ್ ಎಂದು ಹೇಳಿದರು. ಬೊಫೋರ್ಸ್ ಹಗರಣದ ಬಗ್ಗೆ ಉಲ್ಲೇಖಿಸಿದ ಮೋದಿ, ರಾಹುಲ್ ಗಾಂಧಿ ತನ್ನ ವರ್ಚಸ್ಸು ಕುಗ್ಗಿಸಿ ದುರ್ಬಲ ಸರಕಾರ ಅಧಿಕಾರಕ್ಕೆ ಬರುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

Leave a Reply