ಮುಂಬೈ: ವಿಶ್ವ ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಹತ್ತಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡವರು. ಈಗ ಅವರು ಮಹಿಳಾ ಕ್ಷೌರಿಕರಿಂದ ಶೇವಿಂಗ್ ಮಾಡಿಸಿಕೊಳ್ಳುವ ಮೂಲಕ ಮತ್ತೊಂದು ‘ಪ್ರಥಮ’ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ.

ಕ್ರಿಕೆಟ್ ಮಾತ್ರಿಕ ದಾಖಲೆ ರಾಜ ಸಚಿನ್ ತೆಂಡೂಲ್ಕರ್ ಅವರಿಗೆ ಮಹಿಳಾ ಕ್ಷೌರಿಕರಾದ ನೇಹಾ ಹಾಗೂ ಜ್ಯೋತಿ ಶೇವಿಂಗ್ ಮಾಡುವ ಮೂಲಕ ಭಾರತದಲ್ಲಿ ನೂತನ ಪರಂಪರೆಗೆ ನಾಂದಿ ಹಾಡಿ ಭಾರೀ ಸುದ್ದಿ ಮಾಡಿದ್ದಾರೆ.

“ನಿಮಗೊಂದು ಅಚ್ಚರಿಯ ಸಂಗತಿ ತಿಳಿಸುವೆ. ನಾನು ಈ ವರೆಗೆ ಯಾರ ಕಡೆಯಿಂದಲೂ ಶೇವ್ ಮಾಡಿಸಿಕೊಂಡಿರಲಿಲ್ಲ. ನನ್ನ ಪಾಲಿಗೆ ಇದೊಂದು ದಾಖಲೆ, ಮಹಿಳಾ ಕ್ಷೌರಿಕರಿಂದ ಶೇವಿಂಗ್ ಮಾಡಿಸಿಕೊಂಡಿದ್ದು ಒಂದು ಗೌರವ ಎಂದು ಭಾವಿಸುವೆ” ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಮಹಿಳಾ ಕ್ಷೌರಿಕರಾದ ನೇಹಾ ಹಾಗೂ ಜ್ಯೋತಿ ಅವರಿಂದ ಸಚಿನ್ ತೆಂಡೂಲ್ಕರ್ ಶೇವಿಂಗ್ ಮಾಡಿಸಿಕೊಂಡ ಸಂಗತಿಯನ್ನು ಜಿಲೆಟ್ ಕಂಪನಿ ಬಹಿರಂಗಗೊಳಿಸುತ್ತಿದ್ದಂತೆ ಯೂ ಟ್ಯೂಬ್ ಒಂದರಲ್ಲಿಯೇ 16 ಮಿಲಿಯನ್ ಜನರು ನೋಡಿ ತಮ್ಮ ಮೆಚ್ಚುಗೆ ಹಾಗೂ ಅಚ್ಚರಿ ಸೂಚಿಸಿದ್ದಾರೆ. ಇದೇ ವೇಳೆಗೆ ಜಿಲೆಟ್ ಕಂಪನಿಯು ನೇಹಾ ಹಾಗೂ ಜ್ಯೋತಿ ಅವರ ಶಿಕ್ಷಣ ಹಾಗೂ ವೃತ್ತಿಗೆ ಅಗತ್ಯಗಳನ್ನು ಖರೀಧಿಸಲು ನೆರವಾಗಲು ನೀಡಡಿದ ಜಿಲೆಟ್ ವೇತನ ಪ್ರಮಾಣ ಪತ್ರವನ್ನು ಸಚಿನ್ ತೆಂಡೂಲ್ಕರ ಅವರಿಗೆ ನೀಡಿದರು.

ಏನಿದು ಸ್ಟೋರಿ: 

ಉತ್ತರ ಪ್ರದೇಶದ ಇಬ್ಬರು ಸಹೋದರಿಯರು ತಮ್ಮ ಅನಾರೋಗ್ಯ ಪೀಡಿತ ತಂದೆಯ ಚಿಕಿತ್ಸೆಗಾಗಿ ತಂದೆಯ ಸೆಲೂನನ್ನು ಸುಮಾರು ನಾಲ್ಕು ವರ್ಷ ನಡೆಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಅವರು ಸ್ವಯಂ ಹುಡುಗರಂತೆ ಹೇರ್ ಕಟ್ಟಿಂಗ್ ಮಾಡಿಸಿ, ಪುರುಷರ ವೇಷ ಧರಿಸಿ, ಪುರುಷರಂತೆ ನಟಿಸಿ ಕ್ಷೌರದಂಗಡಿ ನಡೆಸುತ್ತಿದ್ದರು ಎಂಬುದೇ ವಿಶೇಷ.

ತಂದೆ ಅನಾರೋಗ್ಯ ಪೀಡಿತರಾದಾಗ ಸೆಲೂನ್ ಕೆಲವು ಕಾಲ ಮುಚ್ಚಲ್ಪಟ್ಟಿತು. ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದ ಅಪ್ಪನ ಸೆಲೂನ್ ಹೀಗೆ ಮುಚ್ಚಬಾರದು ಎಂದು 18 ವರ್ಷ ವಯಸ್ಸಿನ ಜ್ಯೋತಿ ಕುಮಾರಿ ಮತ್ತು 16 ವಯಸ್ಸಿನ ಸಹೋದರಿ ನೇಹಾ ತೀರ್ಮಾನಿಸಿದರು. ಆರಂಭದಲ್ಲಿ ನಮ್ಮ ಬಳಿ ಕೂದಲು ಕತ್ತರಿಸಲು, ಮೀಸೆ ಕತ್ತರಿಸಲು ಶೇವಿಂಗ್ ಮಾಡಲು ಜನರು ಹಿಂಜರಿಯುತ್ತಿದ್ದರು. ಆದ್ದರಿಂದ ನಾವು ವೇಷ ಬದಲಿಸಿ ಪುರುಷರಂತೆ ಕೂದಲು ಕತ್ತರಿಸಿ, ಕೈಗೆ ಪುರುಷರ ಸ್ಟೀಲ್ ಬ್ರೆಸ್ಲೈಟ್ ಧರಿಸಿ ದೀಪಕ್ ಮತ್ತು ರಾಜು ಎಂಬ ಹೊಸ ಹೆಸರನ್ನಿಟ್ಟು ತಮ್ಮ ಕೆಲಸವನ್ನು ಹೊಸ ರೀತಿಯಲ್ಲಿ ಪ್ರಾರಂಭಿಸಿದರು.

ಸುತ್ತಮುತ್ತಲಿನ ಸುಮಾರು ನೂರು ಮನೆಯವರಿಗೆ ಇವರ ಗುರುತು ಇತ್ತೇ ಹೊರತು ಹೊರಗಿನವರು ಬಂದು ಕೂದಲು ಕತ್ತರಿಸಲು ತೊಡಗಿದರು. ಆರಂಭದಲ್ಲಿ ಇವರಿಬ್ಬರಿಗೆ ದಿನಕ್ಕೆ ಸುಮಾರು 400 ರೂಪಾಯಿಗಳಷ್ಟು ಸಂಪಾದನೆ ಆಗುತ್ತಿತ್ತು. ಅದು ಅವರ ಕುಟುಂಬದ ಪೋಷಣೆ ಮತ್ತು ತಂದೆಯ ಔಷಧಿಗೆ ಸಾಕಾಗುತ್ತಿತ್ತು ಎಂದು ಗಾರ್ಡಿಯನ್ಗೆ ಜೊತಿ ಹೇಳಿದ್ದಾರೆ.

ಆರಂಭದ ದಿನಗಳಲ್ಲಿ ನಮಗೆ ಇದು ತುಂಬಾ ಸವಾಲಾಗಿತ್ತು. ಗ್ರಾಮದ ಜನರು ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು. ನಾವು ಅವೆಲ್ಲವನ್ನೂ ನಿರ್ಲಕ್ಷಿಸಿ ನಮ್ಮ ಕೆಲಸದ ಕಡೆಗೆ ಗಮನ ಕೊಟ್ಟೆವು. ಯಾಕೆಂದರೆ ನಮಗೆ ಬೇರೆ ಆಯ್ಕೆಗಳೇ ಇರಲಿಲ್ಲ. ಈಗ ಎಲ್ಲರೂ ನಿಸ್ಸಂಕೋಚವಾಗಿ ನಮ್ಮ ಬಳಿ ಕೂದಲು ಕತ್ತರಿಸುತ್ತಾರೆ ಎಂದು ಜ್ಯೋತಿ ಹೇಳುತ್ತಾರೆ.

ಈ ಧೀರ ಸಹೋದರಿಯರು ಮದ್ಯಾಹ್ನದ ಬಳಿಕವೇ ತಮ್ಮ ಸೆಲೂನನ್ನು ತೆರೆಯುತ್ತಿದ್ದರು. ಯಾಕೆಂದರೆ ಬೆಳಗ್ಗೆ ಅವರು ಕಲಿಯಲು ಹೋಗುತ್ತಿದ್ದರು. ಇದೀಗ ಜ್ಯೋತಿ ಪದವಿ ಶಿಕ್ಷಣ ಪೂರ್ತಿಗೊಳಿಸಿದರೆ, ನೇಹಾ ಇನ್ನೂ ಕಲಿಯುತ್ತಿದ್ದಾಳೆ.

ನನ್ನ ಮಕ್ಕಳು ಕೆಲಸ ಮಾಡುವುದನ್ನು ಕಂಡು ನನಗೆ ತುಂಬಾ ನೋವಾಗಿತ್ತು. ಆದರೆ ಈಗ ನನ್ನ ಮಕ್ಕಳ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಅವರು ಕುಟುಂಬದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಕ್ಷೌರಿಕ ಮತ್ತು ಸಹೋದರಿಯರ ತಂದೆ ಧ್ರವ್ ನಾರಾಯಣ್ ಹೇಳುತ್ತಾರೆ.

ಈ ವಿಷಯ ಸ್ಥಳೀಯ ಪತ್ರಿಕೆಯಲ್ಲಿ ವರದಿಯಾದಾಗ ಸರಕಾರ ಇವರನ್ನು ನಗದು ಬಹುಮಾನ ನೀಡಿ ಗೌರವಿಸಿತು. ಇಂತಹ ಹೆಣ್ಣು ಮಕ್ಕಳು ಹೆತ್ತವರ ದೇಶದ ಹೆಮ್ಮೆ ಆಗಿದ್ದಾರೆ.

 

 

Leave a Reply