ಮುಂಬೈ : ಲೈಂಗಿಕ ಸಂಬಂಧ ಬೆಳೆಸಲು ಯುವತಿಯಿಂದ ಒತ್ತಡ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ಮಹಾರಾಷ್ಟ್ರದ ಪರ್ಬಾನೀ ಜಿಲ್ಲೆಯಲ್ಲಿ ನಡೆದಿದೆ.

ಪರ್ಬಾನಿಯ ಖಾಸಗಿ ಆಸ್ಪತ್ರೆಯೊಂದರ ನೌಕರರಾಗಿರುವ ಸಚಿನ್ ಮಿತ್‍ಕಾರೀ(36) ಆತ್ಮಹತ್ಯೆಗೈದ ಯುವಕ. ಘಟನಾ ಸ್ಥಳದಲ್ಲಿ ಸಚಿನ್ ಬರೆದಿಟ್ಟ ಚೀಟಿಯಲ್ಲಿ ಯುವತಿ ನೀಡುತ್ತಿರುವ ಮಾನಸಿಕ ಕಿರುಕುಳದ ಮಾಹಿತಿ ದೊರೆತಿದೆ. ತನ್ನ ಸಹೋದ್ಯೋಗಿಯೋರ್ವಳಿಂದ ಯುವಕ ಮಾನಸಿಕ ಕೀಟಲೆ ಅನುಭವಿಸಿದ್ದನು.

ತಾನು ವಿವಾಹಿತನಾಗಿರುವೆನೆಂದು ಹೇಳಿದರೂ ಕೇಳದ ಆಕೆ ನನ್ನ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತೆಂದು ಸುಳ್ಳು ಕೇಸು ಹಾಕಿ ಜೈಲಿಗೆ ಹಾಕುವೆನೆಂದು ಬೆದರಿಕೆ ಹಾಕಿದ್ದಳು. ಇದರಿಂದ ನೊಂದ ಆತ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆಗೈದಿದ್ದ. ಯುವತಿಯ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕೇಸು ದಾಖಲಿಸಲಾಗಿದೆ.

Leave a Reply