ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ದೇಶ ತೊರೆಯುವುದನ್ನು ತಡೆಯಬೇಕೆಂದು ಸುಪ್ರೀಮ್ ಕೋರ್ಟಿಗೆ ಸ್ವೀಡಿಶ್ ಟೆಲಿಕಾಮ್ ಕಂಪೆನಿಯಾದ ಎರಿಕ್ಸನ್ ಅರ್ಜಿ ಹಾಕಿದೆ. ನಮಗೆ ಸಿಗಬೇಕಾಗಿರುವ 550 ಕೋಟಿ ರೂಪಾಯಿ ಕೊಡುವುದರಲ್ಲಿ ಅನಿಲ್ ಅಂಬಾನಿ ಲೋಪವೆಸಗಿದ್ದಾರೆ, ಅನಿಲ್ ಅಂಬಾನಿ ಗ್ರೂಪ್ ಎರಿಕ್ಸನ್ ಗೆ 1500 ಕೋಟಿ ರೂಪಾಯಿ ನೀಡಬೇಕಿತ್ತು ನ್ಯಾಯಾಲಯ ಮಧ್ಯೆ ಪ್ರವೇಶಿಸಿದ ಬಳಿಕ 500 ಕೋಟಿಗೆ ಇಳಿಸಲಾಗಿತ್ತು. ಸೆಪ್ಟಂಬರ್ 30 ರೊಳಗೆ ನೀಡುವೆನೆಂಬ ವಾಗ್ದಾನವನ್ನೂ ನೀಡಲಾಗಿತ್ತು.

ಆದರೆ ಇನ್ನೂ ಹಣ ಮರಳಿಸದ ಕಾರಣ ಎರಕ್ಸನ್ ನ್ಯಾಯಾಲಯದ ಮೊರೆ ಹೋಗಿದೆ.

” ಅನಿಲ್ ಅಂಬಾನಿ ಗ್ರೂಪ್ ಗೆ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಅವರು ಕಾನೂನುಗಳನ್ನು ಬುಡಮೇಲುಗೊಳಿಸುತ್ತಾರೆ. ಆದ್ದರಿಂದ ಈ ಕಂಪೆನಿಯ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಅನಿಲ್ ಅಂಬಾನಿ ದೇಶ ತೊರೆಯುವುದನ್ನು ತಡೆಯಬೇಕೆಂದು ದಾವೆಯಲ್ಲಿ ಸೂಚಿಸಲಾಗಿದೆ.

Leave a Reply