ಬೇಕಾಗುವ ಸಾಮಗ್ರಿಗಳು:

ಮೀನು- 250 ಗ್ರಾಂ, ಸಣ್ಣ ನೀರುಳ್ಳಿ- 1 ಕಪ್, ದೊಡ್ಡ ಜೀರಿಗೆ- 2 ಟೀ.ಸ್ಪೂ., ತೆಂಗಿನತುರಿ- 1 ಕಪ್, ಕುಚಲಕ್ಕಿ- 1/2 ಕಿಲೋ, ಹಸಿಮೆಣಸು- 5, ನೀರುಳ್ಳಿ5, ಬೆಳ್ಳುಳ್ಳಿ- 3 ಎಸಳು, ಶುಂಠಿ- ಸಣ್ಣ ತುಂಡು.

ಮಾಡುವ ವಿಧಾನ:

ಅಕ್ಕಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಅದಕ್ಕೆ ಸ್ವಲ್ಪ ತೆಂಗಿನ ತುರಿ, ಜೀರಿಗೆ, ಸಣ್ಣ ನೀರುಳ್ಳಿ ಸೇರಿಸಿ ಅರೆಯಿರಿ. ಕೈಯಲ್ಲಿ ಸ್ವಲ್ಪ ಹಿಟ್ಟು ತೆಗೆದು ಕೈಯಲ್ಲಿ ಹರಡಿಕೊಂಡು ಮೀನು ಮಸಾಲೆಯನ್ನು ಅದಕ್ಕೆ ಹಾಕಿ. ನಂತರ ಮೊಟ್ಟೆಯಾಕಾರದಲ್ಲಿ ಮಾಡಿ ಆವಿಯಲ್ಲಿ ಬೇಯಿಸಿ. ಬೆಂದ ಬಳಿಕ ಅದನ್ನು ಹೊರತೆಗೆದು ಮೆಣಸಿನ ಹುಡಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಕಾಯಿಸಿ ತೆಗೆಯಿರಿ.

Leave a Reply