ಮುಂಬೈ : ಸೂಪರ್ ಹಿಟ್ ಸಿನೆಮಾ ಗಜನಿ ಚಿತ್ರದಲ್ಲಿ ಅಮೀರ್ ಖಾನ್ ಅಲ್ಪಾವಧಿ ನೆನಪು ಕಳೆದು ಕೊಳ್ಳುವ (short-term memory loss) ರೋಗಿಯ ಪಾತ್ರವನ್ನು ನಿರ್ವಹಿಸಿದ್ದರು. ಅದೇ ಗಜಿನಿ ಚಿತ್ರದಿಂದ ಸ್ಫೂರ್ತಿ ಪಡೆದ ವ್ಯಕ್ತಿಯೋರ್ವರು ಅದೇ ರೋಗದಿಂದ ಬಳಲುತ್ತಿದ್ದ ತನ್ನ ಮಗನ ದೇಹದಲ್ಲಿ ಮೊಬೈಲ್ ಸಂಖ್ಯೆಯ ನಂಬರ್ ಮತ್ತು ಹೆಸರಿನ ಹಚ್ಚೆ ಹಾಕಿಸಿದರು.

ಅವರ ಮಗನಿಗೆ ಈಗ 21 ವರ್ಷ , ಆದರೆ ಶಾಲೆಗೆ ಹೋದರೆ ಮನೆಗೆ ಹಿಂದಿರುಗದೆ ಆತ ಎಲ್ಲೆಲ್ಲಾ ಹೋಗುತ್ತಿದ್ದ.

“ನನ್ನ ಮಗ ಶಿವ ವಿಶೇಷ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿದ್ದಾನೆ. ಅವನು ಶಾಲೆಯ ವ್ಯಾನ್ ಗೆ ಹತ್ತದೇ ಹೊರಗೆ ಓದಿ ಹೋದನು. ನಂತರ ಜಿಟಿಬಿಎನ್ ಸ್ಟೇಷನ್ನಿಂದ ನನ್ನ ನಂಬರಿಗೆ ಕರೆ ಮಾಡಿದನು” ಎಂದು ಬಸ್ ಚಾಲಕ ರಾಗಿರುವ ಹುಡುಗನ ತಂದೆ ವೆಂಕಣ್ಣ ಹೇಳಿದರು.

ಗಜನಿ ನೋಡಿದ ಬಳಿಕ ನನ್ನ ಸ್ನೇಹಿತ ನನ್ನ ಮಗನಿಗೂ ಹಾಗೆ ಟ್ಯಾಟೂ ಹಾಕಲು ಸಲಹೆ ನೀಡಿದರು. ಸುಮಾರು ೫ ವರ್ಷಗಳ ಹಿಂದೆ ಹೀಗೆ ಅವನ ದೇಹದಲ್ಲಿ ನಾನು ಟ್ಯಾಟೂ ಹಾಕಿಸಿದೆ ಎಂದು ಅವರು ಹೇಳಿದರು.

ಶಿವನನ್ನು ಸಮವಸ್ತ್ರದಲ್ಲಿ ನೋಡಿದ ಧನನ್ಯ ಯಾಧವ್ ಆತನನ್ನು ಕಂಡು ಮಾತನಾಡಿಸಿದಾಗ ಆತ ಮೊದಲು ಭಯ ಪಡುತ್ತಾನೆ ನಂತರ ಅವನ ದೇಹದಲ್ಲಿ ಕಂಡ ಟ್ಯಾಟೂ ನೋಡಿ ಕರೆ ಮಾಡಿದರು ಎಂದು ಅವರು ಹೇಳಿದರು.

Leave a Reply