ದಕ್ಷಿಣ ಮಂಗೋಲಿಯಾ ಮತ್ತು ವಾಯುವ್ಯ ಚೀನಾದ ಭೂಮಿಯನ್ನೊಳಗೊಂಡಂತೆ 500,000 ಚದುರ ಮೈಲಿ ವಿಸ್ತಾರಕ್ಕೆ ಹರಡಿಕೊಂಡಿರುವ ಗೋಬಿ ಮರುಭೂಮಿ ಏಷ್ಯಾದಲ್ಲೇ ಅತಿ ದೊಡ್ಡದು. ಚೀನಾದ ಹುಲ್ಲುಗಾವಲುಗಳ ಮೇಲೆ ವರ್ಷಕ್ಕೆ 1390 ಚದುರ ಮೈಲಿಗಳಷ್ಟು ವೇಗದಲ್ಲಿ ವ್ಯಾಪಿಸುತ್ತದೆ.

ಈಸ್ಟರ್ ಗೋಬಿ ಮರುಭೂಮಿ ಹುಲ್ಲುಗಾವಲು, ಆಲಶನ್ ಪ್ರಸ್ಥಭೂಮಿ, ಗೋಬಿ ಸರೋವರಗಳ ಕಣಿವೆ , ಜುಂಗರ್ ಜಲಾನಯನ ಮತ್ತು ಟಿಯಾನ್ ಶ್ಯಾನ್ ಶ್ರೇಣಿ ಮುಂತಾದ ಐದು ಪ್ರಮುಖ ಪರಿಸರ ಪ್ರದೇಶಗಳಿವೆ. ಇವುಗಳಲ್ಲಿ ಪರ್ವತಗಳು, ಉಪ್ಪು ಚೌಗು, ರಾಕಿ ಭೂ ದೃಶ್ಯಗಳು, ಮರಳು ದಿಬ್ಬಗಳು ಸೇರಿದಂತೆ ವೈವಿಧ್ಯಮಯ ಭೌಗೋಳಿಕ ಲಕ್ಷಣಗಳಿವೆ.

ಐತಿಹಾಸಿಕ ಪ್ರಾಮುಖ್ಯತೆಯೂ ಇದ್ದು ಪ್ರಾಚೀನ ರೇಷ್ಮೆ ಮಾರ್ಗ ಇಲ್ಲಿ ಹಾದುಹೋಗುತ್ತದೆ. ಮೋಗಾವೋ ಗುಹೆಗಳು ದಕ್ಷಿಣದ ರಿಮ್‌ನಲ್ಲಿರುವ ಬೌದ್ದ ಗುಹಾದೇವಾಲಯಗಳ ಸರಣಿ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, 1000 ಪುರಾತನ ಬೌದ್ದ ಕಲಾಕೃತಿಗಳಿವೆ.

Leave a Reply