* ಲೆದರ್‌ನಂತಹ ವಸ್ತುಗಳು ಒದ್ದೆಯಾದರೆ ಅದು ಹಾಳಾಗುವ ಸಾಧ್ಯತೆಯಿದೆ. ಆದ್ದರಿಂದ ಇಂತಹ ಶೂಗಳನ್ನು ಮೇಣದಿಂದ ಸವರಿ ಹಯರ್ ಡ್ರೈಯರ್‌ನಲ್ಲಿ ಒಣಗಿಸಿದರೆ ಶೂ ವಾಟರ್ ಪ್ರೊಫ್ ಆಗುತ್ತದೆ.

* ಮಳೆಗಾಲದಲ್ಲಿ ಶೂವಿನ ವಾಸನೆ ಮುಜುಗರ ತರಿಸುತ್ತಿದೆಯಾ? ರಾತ್ರಿ ಶೂನ ಒಳಗೆ ಸಾಬೂನೋ ಅಥವಾ ಟೀ ಬ್ಯಾಗನ್ನೋ ಇಟ್ಟರೆ ಬೆಳಿಗ್ಗೆ ಆಗುವಾಗ ಶೂನ ವಾಸನೆ ಫ್ರೆಶ್ ಆಗಿರುತ್ತದೆ.

* ಬಿಳಿ ಬಣ್ಣದ ಶೂವನ್ನು ಸ್ವಚ್ಚಗೊಳಿಸುವುದು ಬಹಳ ತ್ರಾಸದಾಯಕ ಕೆಲಸ, ಟೂತ್ ಪೇಸ್ಟ್ ಉಪಯೋಗಿಸಿದರೆ ಬಿಳಿ ಶೂ ಬೇಗನೇ ಸ್ವಚ್ಚವಾಗುವುದು.

* ಶೂ ಉಪಯೋಗಿಸುವಾಗ ಕಾಲಿನಲ್ಲಿ ಗುಳ್ಳೆಗಳಾಗು ವುದಿದೆ. ಧರಿಸುವ ಮೊದಲು ಡಿಯೋಡ್ರನ್ಸ್ ಜೆಲ್ ಉಪಯೋಗಿಸಿ ಶೂ ಧರಿಸಿದರೆ ಇದನ್ನು ತಪ್ಪಿಸಬಹುದು.

* ಹೊಸ ಶೂ ಧರಿಸುವಾಗ ನೋವಾಗುವುದನ್ನು ತಡೆಯಲು ಶೂಗೆ ಬೇಬಿ ಪೌಡರ್ ಸವರಿದರೆ ಸಾಕು.

* ಹೊಸ ಶೂ ಟೈಟ್ ಇದ್ದರೆ ಗಟ್ಟಿಯಾದ ಸಾಕ್ಸ್ ಧರಿಸಿದ ಬಳಿಕ ಹೆಯರ್‌ ಡ್ರೈಯರ್ ಉಪಯೋಗಿಸಿ ಶೂನ ಎಲ್ಲಾ ಕಡೆಯೂ ಬಿಸಿ ಮಾಡಿದರೆ ಶೂ ಸ್ವಲ್ಪ ಸಡಿಲವಾಗುತ್ತದೆ.

* ದಿನಾಲು ಹೀಲ್ಡ್ ಚಪ್ಪಲ್ ಧರಿಸುವವರು ಮನೆಗೆ ತಲುಪಿದ ಬಳಿಕ ಪಾದಗಳ ವ್ಯಾಯಾಮ ಮಾಡುವುದು ಒಳ್ಳೆಯದು. ಟೆನಿಸ್ ಬಾಲನ್ನು ಪಾದಗಳ ನಡುವೆ ಇಟ್ಟು ಉರುಳಿಸುವುದು, ಕಾಲಿನ ಬೆರಳನ್ನು ಉಪಯೋಗಿಸಿ ಸಣ್ಣ ವಸ್ತುಗಳನ್ನು ಹೆಕ್ಕುವುದು ಒಳ್ಳೆಯದು.

Leave a Reply