ನಾನು 36 ಹರೆಯದ ಗಂಡಸು. ನನ್ನ ಪತ್ನಿಗೆ 33. ನಮಗಿಬ್ಬರು ಮಕ್ಕಳಿದ್ದು ಎರಡನೇ ಮಗುವಿನ ಹೆರಿಗೆಯಲ್ಲಿ ವೈದ್ಯರು ಹೆಂಡತಿಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರಿಂದ ನಾವು ಸೇರುವಾಗ ಸಂತೋಷ ಕಡಿಮೆಯಾಗುತ್ತಿದೆಯೇ? ಜೊತೆಗೆ ಶೀಘ್ರ ಸ್ಕಲನ ಉಂಟಾಗಿದ್ದು, ನನಗೆ ಈಗೀಗ ಪತ್ನಿಯೊಂದಿಗೆ ಲೈಂಗಿಕತೆಯ ಆಸಕ್ತಿ ಕಡಿಮೆಯಾಗಿದೆ. ಪರಸ್ತ್ರೀ ಮೋಹವುಂಟಾಗಿದೆ. ಇದುವರೆಗೆ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ. ಆದರೆ ಮನಸ್ಸು ಆ ಕಡೆಗೆ ಸೆಳೆಯುತ್ತದೆ. ಪರಿಹಾರ ತಿಳಿಸಿ.

ಸಲಹೆ: ವೈದ್ಯರು ಹೆರಿಗೆಗೆ ಸುಲಭವಾಗಲು ಅನೇಕ ಸಲ ಮಹಿಳೆಯರ ಗುಪ್ತಾಂಗ ಉದ್ದೇಶಪೂರ್ವಕವಾಗಿ ದೊಡ್ಡದು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಹೊಲಿಗೆ ಹಾಕುವುದರಿಂದ ಮೊದಲಿನ ಸ್ಥಿತಿಗೆ ಬರುವುದು. ಇದಕ್ಕೂ ಲೈಂಗಿಕ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ತೃಪ್ತಿ ಸಮಸ್ಯೆಯಗಳು ಉದ್ಭವಿಸುವುದು ಮನಸ್ಸಿನಲ್ಲಿ ಅಥವಾ ಮಿದುಳಿನಲ್ಲಿ ಚಿಕಿತ್ಸೆಯೂ ಕೂಡ ಅಲ್ಲಿಂದಲೇ ಪ್ರಾರಂಭ ವಾಗಬೇಕು. ಆದ್ದರಿಂದ ಶಸ್ತ್ರಚಿಕಿತ್ಸೆ ಆದ ಮೇಲೆ ಲೈಂಗಿಕ ಆಸಕ್ತಿ ಕಮ್ಮಿಯಾಗುತ್ತದೆ ಎನ್ನುವುದಕ್ಕೆ ಆಧಾರವಿಲ್ಲ. ಮಧ್ಯ ವಯಸ್ಸಿನ ಪುರುಷರಲ್ಲಿ ಲೈಂಗಿಕ ದುರ್ಬಲತೆ ಕೆಲವು ಕಾಲ ಉದ್ಭವಿಸುವುದು ಕೂಡಾ ಸರ್ವೇಸಾಮಾನ್ಯ ಆಸಕ್ತಿ ಹೆಚ್ಚಾದಂತೆ ದೇಹ ಸಹಕರಿಸದೇ ಇರುವುದರಿಂದ ಸಹಜವಾಗಿ ಬೇಸರವಾಗುತ್ತದೆ.

ಈ ವಯಸ್ಸಿನಲ್ಲಿ ಚಂಚಲತೆ ಉಂಟಾಗಿ ಪರ ಸ್ತ್ರೀ ಮೋಹ ಉಂಟಾಗುತ್ತದೆ. ನಪುಂಸಕತ್ವ ಪರೀಕ್ಷೆ ನಡೆಸಲು ವೇಶ್ಯಯರ ಬಳಿ ಕೆಲವರು ಹೋಗುವುದುಂಟು. ಇದೊಂದು ಸಂಕ್ರಮಣ ಕಾಲ. ಸರಿಯಾಗಿ ಹೆಜ್ಜೆ ಇಡದಿದ್ದರೆ ತಪ್ಪು ದಾರಿಗೆ ಸಾಗುವ ಸಾಧ್ಯತೆ ಇದೆ.

೧. ನೀವು ತಮ್ಮ ಸಂಗಾತಿಯೊಂದಿಗೆ ಸೇರುವ ಮೊದಲು ಅದಕ್ಕೆ ಪೂರ್ವ ತಯಾರಿ ಸರಸ ಸಲ್ಲಾಪ ಮಾಡಬೇಕು. ಇದರಿಂದ ಇಬ್ಬರಿಗೂ ಸಂತೃಪ್ತಿ ಸಿಗುತ್ತದೆ. ಲೈಂಗಿಕತೆ ಎನ್ನುವುದು ಒಂದು ಕಲೆ ಗಂಡಾಸದವರು ಅದನ್ನು ಕರಗತ ಮಾಡಿಕೊಳ್ಳಬೇಕು.

೨. ನಕಲಿ ವೈದ್ಯರು ನಿಮ್ಮ ಸಮಸ್ಯೆಗೆ ಹಣ ದೋಚುವ ಸಾಧ್ಯತೆ ಇದೆ. ಆದ್ದರಿಂದ ತಜ್ಞ ವೈದ್ಯರಿಂದ ನಿಮ್ಮ ಶೀಘ್ರ ಸ್ಕಲನಕ್ಕೆ ಚಿಕಿತ್ಸೆ ಮಾಡಿಸಿ ಕೊಳ್ಳಿ.

೩. ಪರಸ್ತ್ರೀಯ ಮೋಹ ಎಂಬುದು ದೂರದ ಬೆಟ್ಟ ನುಣ್ಣಗೆ ಇದ್ದಂತೆ. ಇದರಿಂದ ಅನೈತಿಕ ದಾರಿಗೆ ತಾವು ಸಾಗುತ್ತೀರಿ. ಅನೈತಿಕತೆ ಪರಿಣಾಮ ತಾವು ಪತ್ರಿಕೆಯಲ್ಲಿ ನೋಡಿರಬಹುದು, ಒಂದೋ ಮಾನ ಹೋಗುತ್ತದೆ, ಇಲ್ಲವೇ ಕೊಲೆಯಂತಹ ತಕರಾರಿನಲ್ಲಿ ಕೊನೆಗೊಳ್ಳುತ್ತದೆ. ಮಾತ್ರವಲ್ಲ ಸಾಂಕ್ರಾಮಿಕ ರೋಗಕ್ಕೂ ತುತ್ತಾಗುವ ಸಾಧ್ಯತೆ ಹೆಚ್ಚು. ಅದಕ್ಕಿಂತಲ್ಲೂ ಪತಿ ಪತ್ನಿ ಎಂಬುದು ಕೇವಲ ಲೈಂಗಿಕತೆ ಎಂದು ಪರಿಗಣಿಸದೆ ನೈಜ ಪ್ರೀತಿ ಇದ್ದರೆ ದೇಹ ಮತ್ತು ಮನಸ್ಸಿಗೂ ಸಂತೃಪ್ತಿ ಸಿಗುತ್ತದೆ.

೪ . ಮನಸ್ಸನ್ನು ಚಂಚಲತೆಯಿಂದ ರಕ್ಷಿಸಲು ಧ್ಯಾನ, ಯೋಗ ಮತ್ತು ಸಜ್ಜನರ ಸಂಘವನ್ನು ಬೆಳೆಸಿಕೊಳ್ಳಿ.

೫. ಲೈಂಗಿಕ ಸಮಸ್ಯೆಗಳ ಪರಿಹಾರಕ್ಕೆ ಗಂಡ ಹೆಂಡತಿಯರ ಪರಿಹಾರ ಅತ್ಯಗತ್ಯ. ಈ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಿ ಉತ್ತಮ ಕೌಟುಂಬಿಕ ಜೀವನ ನಿಮ್ಮದಾಗಿಸಿ.

Leave a Reply