ಹದಿಹರೆಯದ ತಾಯಿಯ ಕೈಯಿಂದ ಜೀವಂತ ಸಮಾಧಿ ಆಗಿದ್ದ ನವಜಾತ ಶಿಶುವನ್ನು ಅಂಗ ವಿಕಲ ನಾಯಿಯೊಂದು ರಕ್ಷಿಸಿದ ಘಟನೆ ವರದಿಯಾಗಿದೆ. ಮೂರು ಕಾಲುಗಳನ್ನು ಹೊಂದಿರುವ ಪಿಂಗ್ ಪಾಂಗ್ ಎಂಬ ನಾಯಿ ಥೈಲ್ಯಾಂಡ್ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಿಶುವಿನ ತಾಯಿಗೆ 15 ವರ್ಷ. ಆಕೆ ತನ್ನ ಹೆತ್ತವರಿಂದ ಈ ಹೆರಿಗೆಯನ್ನು ಅಡಗಿಸಲಿಕ್ಕಾಗಿ ಶಿಶುವನ್ನು ಜೀವಂತ ಹೂತಿದ್ದಳು.
ಮೊದಲಿಗೆ ಆ ಪರಿಸರದಲ್ಲಿ ನಾಯಿ ಏನನ್ನೋ ಹುಡುಕುವಂತೆ ಅದರ ಮಾಲೀಕ ನೋಡಿದರು. ಕೊನೆಗೆ ನಾಯಿ ಕಾಲಿನಿಂದ ನೆಲ ಅಗೆಯುವ ಮೂಲಕ ತನ್ನ ಮಾಲಿಕನಿಗೆ ಒಳಗೆ ಏನೋ ಇದೆ ಎಂಬ ಸನ್ನೆ ನೀಡಿತು. ಮಾಲೀಕ ಬಂದು ನೆಲ ಅಗೆದಾಗ ಪುಟ್ಟ ಮಗುವಿನ ಕಾಲು ಕಂಡಿತು.

ಕೂಡಲೇ ಅವರು ಸುತ್ತ ಮುತ್ತಲಿನ ಜನರನ್ನು ಕರೆದು ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಮಗು ಸುಮಾರು ಎರಡೂವರೆ ಕೆಜಿ ತೂಕ ಇದ್ದು, ವೈದ್ಯರು ಮಗುವನ್ನು ಕೂಡಲೇ ಶುಚಿಗೊಳಿಸಿ ಚಿಕಿತ್ಸೆ ನೀಡಿ ಮಗುವನ್ನು ಅಪಾಯದಿಂದ ಪಾರು ಮಾಡಿದರು.
ಮಗುವನ್ನು ಕೊಳ್ಳಲು ಶ್ರಮಿಸಿದ್ದಕ್ಕಾಗಿ ಮಗುವಿನ ತಾಯಿಯನ್ನು ಬಂಧಿಸಿದ್ದು, ತಾಯಿಯ ಹೆತ್ತವರಿಗೆ ಮಗುವನ್ನು ಆರೈಕೆ ಮಾಡುವಂತೆ ಸೂಚಿಸಿದ್ದಾರೆ. ತಾಯಿ ಅಪ್ರಾಪ್ತೆಯಾದರೂ ಆಕೆಯ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ.

Leave a Reply