ಒಂದು ಫೇಸ್ ಬುಕ್ ಪೋಸ್ಟ್ ನ ಸಹಾಯದಲ್ಲಿ 37 ವರ್ಷಗಳ ಬಳಿಕ ವ್ಯಕ್ತಿಯೊಬ್ಬರು ತಮ್ಮ ಕುಟುಂಬ ಸೇರಿಕೊಂಡ ಬಗ್ಗೆ ವರದಿಯಾಗಿದೆ. ರಯೀಝ್ ಎಂಬ ಹೆಸರಿನ ವ್ಯಕ್ತಿಯ ಫೇಸ್ ಬುಕ್ ಪೋಸ್ಟ್‌ ನ ಸಹಾಯದಿಂದ ವಿ.ಮುಹಮ್ಮದ್ ಹೆಸರಿನ ಹಿರಿಯರು 37 ವರ್ಷಗಳ ಬಳಿಕ ಕೋಝಿಕ್ಕೋಡ್ (ಕೇರಳ)ನಲ್ಲಿ ತಮ್ಮ ಕುಟುಂಬವನ್ನು ಸೇರಿಕೊಳ್ಳುವಂತಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುವ ಮುಹಮ್ಮದ್ ಕೊನೆಯ ಬಾರಿಗೆ 1982ರಲ್ಲಿ ಕೋಝಿಕ್ಕೋಡ್ ನ ಮದ್ವೂರಿನಲ್ಲಿ ಕಾಣಸಿಕ್ಕಿದ್ದರು.ರಯೀಝ್ ರ ಪೋಸ್ಟ್ ನ ಬಳಿಕ ಅವರ ಓರ್ವ ಫೇಸ್ ಬುಕ್ ಮಿತ್ರ ಸ್ಥಳೀಯ ನಾಯಕರ ಸಹಾಯದಿಂದ ಮುಹಮ್ಮದ್ ರ ಕುಟುಂಬವನ್ನು ಹುಡುಕಿದರು.

ಕೆಲವು ವರ್ಷ ಮೊದಲು ಕೇರಳದ ನಿವೃತ್ತ ಗಣಿತ ಶಿಕ್ಷಕಿಯೋರ್ವರು ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದರು. ಫೇಸ್ಬುಕ್ ಪೋಸ್ಟ್ ನಿಂದ ಆಕೆಯನ್ನು ವಿದ್ಯಾರ್ಥಿಗಳು ಗುರುತಿಸಿದ್ದರು. ಅವರ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ತಮ್ಮ ‘ವಲ್ಸಾ ಟೀಚರ್’ ರನ್ನು ಗುರುತಿಸಿ ಸಹಾಯ ಮಾಡಲು ಮುಂದೆ ಬಂದರು. ಸ್ವಾಭಿಮಾನಿ ವಾಲ್ಸಾ ತನ್ನ ವಿದ್ಯಾರ್ಥಿಗಳೊಂದಿಗೆ ಹೋಗಲು ನಿರಾಕರಿಸಿದರು ಮತ್ತು ತನ್ನ ಮಗ ಮತ್ತು ಪತಿಯೊಂದಿಗೆ ಮಾತ್ರ ಹೋಗುವೆ ಎಂದು ಒತ್ತಾಯಿಸಿದರು.

 

Leave a Reply