ರೋಮ್: ಪೋರ್ಚುಗಲ್‌ನ ಅನುಭವಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇಟಲಿಯ ಸೀರಿಸ್ ‘ಎ’ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಟಲಿಯ ಯುವೆಂಟಸ್ ತಂಡವನ್ನು ಪ್ರತಿನಿಧಿಸಿದ ವರ್ಷವೇ ಪ್ರಶಸ್ತಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇದಕ್ಕೂ ಮುನ್ನ ವಿಶ್ವದ ಶ್ರೇಷ್ಠ ಫುಟ್ಬಾಲ್ ಪಟು ಎನಿಸಿದ ಕ್ರಿಸ್ಟಿಯಾನೋ ರೊನಾಲ್ಡೊ ಇಂಗ್ಲೆಂಡ್, ಸ್ಪೇನ್ ಹಾಗೂ ಇಟಲಿಯಲ್ಲಿ ವರ್ಷದ ಶ್ರೇಷ್ಠ ದೇಶಿಯ ಫುಟ್ಬಾಲ್ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಹತ್ತಾರು ಪ್ರಶಸ್ತಿಗಳನ್ನು ಪಡೆದ 34 ವರ್ಷದ ಆಟಗಾರ ರೊನಾಲ್ಲೊ. ವಿಶ್ವದ ಶ್ರೇಷ್ಟ ಫುಟ್ಬಾಲ್ ಪಟುಗಳಿಗೆ  ನೀಡಲಾಗುವ ಬಲೂನ ಡಿಜರ್ ಪ್ರಶಸ್ತಿಯನ್ನು ಒಟ್ಟು ಐದು ಬಾರಿ ಪಡೆಯುವ ಮೂಲಕ ಹಿರಿಮೆ ಮೆರೆದಿದ್ದಾರೆ.

ಖ್ಯಾತ ಫಾರ್ವಾರ್ಡ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ , 2018 ರಲ್ಲಿ ಸ್ಪೇನ್‌ದ ಪ್ರಮುಖ ತಂಡವಾದ ರಿಯಲ್ ಮಾಡ್ರಿಡ್ ತಂಡವನ್ನು ತೊರೆದು ಇಟಲಿಯ ಯುವೆಂಟನ್‌ಗೆ ಸೇರಿದರು. ರಿಯಲ್ ಮ್ಯಾಡ್ರಿಡ್ ತಂಡ ಸತತ ಮೂರು ಬಾರಿ ಪ್ರಶಸ್ತಿ ಪಡೆದಿತ್ತು. ಈ ಗೆಲುವಿನಲ್ಲಿ ರೊನಾಲ್ಡೊ ಪಾತ್ರ ಪ್ರಮುಖವಾಗಿತ್ತು.  ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದು ಇಟಲಿಯ ಯುವೆಂಟನ್ ಸೇರಿದ ನಂತರ ರೊನಾಲ್ಕೂ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದು, ಈ ವರೆಗೆ ಆಡಿದ ಪಂದ್ಯಗಳಲ್ಲಿ ಒಟ್ಟು 21 ಗೋಲು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

Leave a Reply