ಯಾವುದೇ ಒಂದು ಕಂಪೆನಿಯ ಉತ್ತುಂಗತೆಯಲ್ಲಿ ಅದರ ಉದ್ಯೋಗಿಗಳು, ಕೆಲಸಗಾರರ ಪರಿಶ್ರಮ ಇರುತ್ತದೆ. ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಕೆಲವೊಮ್ಮೆ ಅವರ ತ್ಯಾಗ ಪರಿಶ್ರಮಗಳು ಆ ಸಂಬಳದ ಹಿಂದೆ ಅಡಗಿ ಹೋಗುತ್ತದೆ.

ಆದರೆ ಸೂರತ್ ನಗರದ ಉದ್ಯಮಿಯೂ ಕಂಪೆನಿಯ ಮಾಲೀಕರಾದ ಸಾವಿಜ್ ಧೋಲಾಕಿ ಯವರು ತಮ್ಮ ಕಂಪೆನಿಯ ಮೂವರು ಹಿರಿಯ ಸಿಬ್ಬಂದಿಗಳಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ಕಾರನ್ನು ಗಿಫ್ಟ್ ನೀಡಿದ್ದಾರೆ.

ಮೂವರು ಹಿರಿಯ ಸಿಬ್ಬಂದಿಗಳಿಗೆ ಮರ್ಸಿಡಿಸ್-ಬೆನ್ಝ್ (Mercedes-Benz GLS SUV) ಗಿಫ್ಟ್ ನೀಡಿರುವುದಾಗಿ ವರದಿಯಾಗಿದೆ.
ಎರಡು ವರ್ಷಗಳ ಹಿಂದೆ ತನ್ನ ನೌಕರರಿಗೆ 400 ಫ್ಲಾಟ್ ಗಳು ಮತ್ತು 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಅದೇ ತಮ್ಮ ಔದಾರ್ಯವನ್ನು ಮುಂದುವರೆಸಿದ್ದಾರೆ.

ಕಂಪೆನಿಯ ಉದ್ಯೋಗಿಗಳಾದ ನಿಲೇಶ್ ಜಡಾ (40), ಮುಖೇಶ್ ಚಂದ್ಪಾರ (38) ಮತ್ತು ಮಹೇಶ್ ಚಂದ್ಪಾರ (43) ಅವರಿಗೆ
ಮಧ್ಯಪ್ರದೇಶ ಗವರ್ನರ್ ಮತ್ತು ಮಾಜಿ ಗುಜರಾತ್ ಮುಖ್ಯಮಂತ್ರಿ ಆನಂದಬೇನ್ ಪಟೇಲ್ ರವರು ಕಾರಿನ ಕೀಯನ್ನು ಹಸ್ತಾಂತರಿಸಿದರು.

“ಈ ಮೂವರು ಸುಮಾರು 13 ಅಥವಾ 15 ವರ್ಷ ವಯಸ್ಸಿನವರಾಗಿದ್ದಾಗ ನಮ್ಮಲ್ಲಿ ಕೆಲಸಕ್ಕೆ ಸೇರಿಕೊಂಡರು. ವಜ್ರಗಳನ್ನು ಕತ್ತರಿಸಿ ಅದನ್ನು ಹೊಳಪು ಮಾಡಲು ಕಲಿಯುವುದರೊಂದಿಗೆ ಅವರು ತಮ್ಮ ವೃತ್ತಿಯನ್ನು ಆರಂಭಿಸಿದರು. ಈಗ ಅವರು ತಜ್ಞರಾಗಿದ್ದಾರೆ. ಮಾತ್ರವಲ್ಲ, ಬಹಳ ವಿಶ್ವಾಸಾರ್ಹರಾಗಿದ್ದಾರೆ. ಅವರ ಹಾರ್ಡ್ವರ್ಕನ್ನು ಪರಿಗಣಿಸಿ ಕಂಪೆನಿಯು ಅವರಿಗೆ ಕಾರನ್ನು ಗಿಫ್ಟ್ ನೀಡಿದೆ ಎಂದು ಧೋಲಾಕಿ ಹೇಳಿದರು.

Leave a Reply