ಓರ್ವ ಮಹಿಳೆ ತನಗೆ ತಾನೇ ಬೆಂಕಿ ಹಚ್ಚುವುದೆಂದರೆ ಎಷ್ಟೊಂದು ಭಯಾನಕವಾಗಿರಬಹುದು. ಸತತವಾಗಿ ಐದು ವರ್ಷಗಳಿಂದ ಅತ್ಯಾಚಾರಕ್ಕೊಳಗಾದ ಅಸಹಾಯಕ ಮಹಿಳೆ ನ್ಯಾಯದ ಹುಡುಕಾಟದಲ್ಲಿ, ಕಾನೂನಿನ ಬಾಗಿಲಿಗೆ ಹೋದಾಗ ಅಲ್ಲಿ ಆಕೆಗೆ ನಿರಾಶೆ ಕಾದಿತ್ತು. ಕೊನೆಗೆ ಮಹಿಳೆ ದಾರಿ ಕಾಣದೆ ತನಗೆ ತಾನೇ ಸ್ವಯಂ ಬೆಂಕಿ ಹಚ್ಚಿ ಕೊಳ್ಳುತ್ತಾರೆ.
“ನನ್ನ ಪತಿ ಸುಮಾರು 20 ಮಂದಿಯಿಂದ ನನ್ನ ಬಲಾತ್ಕಾರ ಮಾಡಿಸಿದ್ದಾರೆ” ಎಂದು ಹಾಪುರದ ರೇಪ್ ಪೀಡಿತೆ ಹೇಳಿದ್ದಾರೆ.
ಉತ್ತರ ಪ್ರದೇಶದ ಹಾಪುರದ ಅತ್ಯಾಚಾರ ಪೀಡಿತೆ ಮಾಧ್ಯಮ ವೊಂದರಲ್ಲಿ ಮಾತನಾಡುತ್ತಾ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ನನ್ನ ಎರಡನೇ ಪತಿ ಅವರ ಸ್ನೇಹಿತರ ಮೂಲಕ ನನ್ನ ರೇಪ್ ಮಾಡಿಸುತ್ತಿದ್ದರು.

ಕೇವಲ 20 ಮಂದಿ ನನ್ನನ್ನು ಅತ್ಯಾಚಾರ ಮಾಡಿದ್ದಲ್ಲದೇ, ನನ್ನ ಮೇಲೆ ಆಸಿಡ್ ಎರಚುವ ಧಮ್ಕಿ ಕೂಡಾ ಹಾಕುತ್ತಿದ್ದರು. ಮುಖ್ಯವಾಗಿ ಈ ಮಹಿಳೆ ದೂರು ನೀಡಲು ಹೋದಾಗ ಆಕೆಯ ದೂರನ್ನು ಸ್ವೀಕರಿಸಿರಲಿಲ್ಲ. ಆದ್ದರಿಂದ ಆಕೆ ಬೇಸತ್ತು ಸ್ವಯಂ ಬೆಂಕಿ ಹಚ್ಚಿದ್ದರು.
ಬೆಂಕಿ ಹಚ್ಚಿ ಪರಿಣಾಮವಾಗಿ ಅವರು ಶೇ.80% ಸುಟ್ಟು ಹೋಗಿದ್ದರು.

 

Leave a Reply