1.ರಂಜಾನ್ ಅಥವ ರಮದಾನ್ (ಅರೇಬಿಕ್‌ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ.  ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ.

2. ಮಾನವಕಲ್ಯಾಣಕ್ಕಾಗಿ ಪ್ರವಾದಿ     ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ.

3. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.

4. ಮುಸ್ಲಿಂ ಮತದಲ್ಲಿ ರಂಜಾನ್ ಆಚರಣೆ ಕಡ್ಡಾಯ ಮತ್ತು ಕಟ್ಟುನಿಟ್ಟಾದರೂ ಕೆಲವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಉಪವಾಸ ಮಾಡದೇ ಇರಬಹುದು. ಆದರೆ ಅದಕ್ಕಾಗಿ ಪ್ರಾಯಶ್ಚಿತ್ತ ಎಂಬಂತೆ ಮುಸ್ಲಿಂ ಮತದಲ್ಲಿರುವ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. 

5. ಗರ್ಭಿಣಿಯರು, ಋತುಮತಿಯಾದವರು, ಬಾಣಂತಿಯರು, ವೃದ್ಧರು, ರೋಗಿಗಳು ಉಪವಾಸವಿರಬೇಕೆಂಬ ಕಡ್ಡಾಯ ನಿಯಮವಿಲ್ಲ. ಅಂಥವರಿಗಾಗಿ ಫಿದಿಯಾ ಮತ್ತು ಕಫಾರಾ ಎಂಬ ನಿಯಮಗಳಿವೆ.

6. ಫಿದಿಯಾ ಮತ್ತು ಕಫಾರಾ ಈ ಎರಡೂ ನಿಯಮಗಳಲ್ಲಿ ಉಪವಾಸ ವ್ರತವನ್ನು ಪಾಲಿಸದೆ ಇರುವವರು ನಿರ್ಗತಿಕರಿಗೆ, ಅಸಹಾಯಕರಿಗೆ ದಾನ ಮಾಡಬೇಕು. ದಾನ ಹಣ, ಊಟ ಯಾವುದೇ ರೂಪದಲ್ಲಿರಬಹುದು.

8. ರಂಜಾನ್ ಸಮಯದಲ್ಲಿ ನೀವು ದೂರದೂರಿಗೆ ಪ್ರಯಾಣಿಸುತ್ತಿದ್ದರೆ ಆಗ ಉಪವಾಸ ಕೈಗೊಳ್ಳಬಾರದು, ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ. ಪ್ರಯಾಣದ ದಿನವನ್ನು ಬಿಟ್ಟು ಬೇರೆ ದಿನ ಉಪವಾಸ ಮಾಡಿ

9. ಮಹಿಳೆಯರು ಉಪವಾಸ ವ್ರತ ಕೈಗೊಂಡಿದ್ದರೆ ಋತುಮತಿಯಾಗಿರುವ ಸಮಯದಲ್ಲಿ, ಹೆರಿಗೆಯ ನಂತರದ ರಕ್ತಸ್ರಾವದಿಂದ ಬಳಲುತ್ತಿದ್ದಲ್ಲಿ ಆ ದಿನಗಳಲ್ಲಿ ಯಾವ ಕಾರಣಕ್ಕೂ ಉಪವಾಸ ಮಾಡುವಂತಿಲ್ಲ.

10. ಅಕಸ್ಮಾತ್ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಉಪವಾಸ ಮಾಡಬೇಕಾದ ಅಗತ್ಯವಿಲ್ಲ. ಅಂಥ ಸಮಯದಲ್ಲಿ ಫಿದಿಯಾ ಮೂಲಕ ಅಸಹಾಯಕರಿಗೆ ದಾನ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು.

11. ಗರ್ಭಿಣಿಯರು ಅಥವಾ ಮಗುವಿಗೆ ಎದೆಹಾಲುಣಿಸುತ್ತಿರುವ ತಾಯಂದಿರು ಉಪವಾಸ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಿಸಿದರೆ ಅಂಥವರು ಉಪವಾಸ ಮಾಡುವ ಅಗತ್ಯವಿಲ್ಲ. ಅದರ ಬದಲಾಗಿ ಫಿಡಿಯಾ ಮಾಡಬಹುದು

12. ವ್ರತ ಪಾಲಿಸುವ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ. ಅಕಸ್ಮಾತ್ ನಡೆಸಿದರೆ ಅದಕ್ಕೆ ಪ್ರಾಯಶ್ಚಿತ್ತ ಕಫಾರಾ. ಉಪವಾಸದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದವನು ನಂತದರ 60 ದಿನ ಕಟ್ಟುನಿಟ್ಟಿನ ಉಪವಾಸ ಪಾಲಿಸಬೇಕು. ಇಲ್ಲವೇ, 60 ಬಡವರಿಗೆ ಹಣ ಅಥವಾ ಊಟ ದಾನ ಮಾಡಬೇಕು.

13. ರಮ್ಜಾನ್ ವೃತ ಆಚರಿಸಿ ಸುಳ್ಳು ಅಶ್ಲೀಲ ಮಾತು ಆಡುವುದನ್ನು ಕಡ್ಡಾಯವಾಗಿ ತಡೆಯಲಾಗಿದೆ. ಇದರಿಂದ ಬಾಯಾರಿಕೆ ಮಾತ್ರ ಸಿಗಬಹುದೇ ವಿನಃ ಉಪವಾಸದ ಉದ್ದೇಶ, ತರಬೇತಿ ಈಡೇರದು.

14. ರಮ್ಜಾನ್ ತಿಂಗಳಲ್ಲಿ ಹೆಚ್ಚಾಗಿ ಬಡವರಿಗೆ, ಸಾಲಗಾರರಿಗೆ, ಯಾತ್ರಿಕರಿಗೆ, ಗುಲಾಮ ವಿಮೋಚನೆಗೆ ಇತ್ಯಾದಿ ಝಕಾತ್ (ಕಡ್ಡಾಯ ದಾನ) ಮತ್ತು ಸದಕ ಐಚ್ಚಿಕ ದಾನ ಹೆಚ್ಚು ಹೆಚ್ಚು ನೀಡಲಾಗುತ್ತದೆ.

Leave a Reply