ಕೇರಳ: ಬ್ಯಾಂಕ್ ನಿಂದ ಮನೆ ಕಟ್ಟಲು 2003 ರಲ್ಲಿ ತೆಗೆದುಕೊಂಡ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದ ನಿಟ್ಟಿನಲ್ಲಿ ತಾಯಿ ಮಗಳು ಸ್ವಯಂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತಿರುವಂತಪುರದಲ್ಲಿ ನಡೆದಿದೆ.
ಈ ಕುಟುಂಬ ಬ್ಯಾಂಕ್ ನಿಂದ ಹದಿನೈದು ವರ್ಷಗಳ ಹಿಂದೆ ಐದು ಲಕ್ಷ ಮನೆ ಸಾಲ ಪಡೆದಿದ್ದರು.  ಹಣ ಪಾವತಿಸುತ್ತಿದ್ದರೂ ಉಳಿದ 6.80 ಲಕ್ಷ ರೂಪಾಯಿ ಬಡ್ಡಿ ಸಮೇತ ಪಾವತಿಸುವಂತೆ ನಿಗದಿಪಡಿಸಿದ್ದ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದ ಕಾರಣ ತಾಯಿ ಲತಾ (42) ಮಗಳು ವೈಷ್ಣವಿ(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆಯ ಪತಿ ಗಲ್ಫ್ ದೇಶದಿಂದ ಉದ್ಯೋಗ ಕಳೆದುಕೊಂಡು ಊರಿಗೆ ಬಂದ ಮೇಲೆ ಹಣ ಪಾವತಿಸಲು ಕಷ್ಟವಾಗಿತ್ತು. ಈ ಬ್ಯಾಂಕ್ ನಲ್ಲಿ ಸಮಯಾವಕಾಶವನ್ನು ಕೇಳಿದ್ದರು.  ಈತನ್ಮಧ್ಯೆ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ನಾವು ಸಾಲ ವಸೂಲಿ ಪ್ರಕ್ರಿಯೆ ನಡೆಸಿರುವುದಾಗಿ ಬ್ಯಾಂಕ್ ಸಿಬ್ಬಂದಿಗಳು ಹೇಳಿದ್ದಾರೆ. ಮನೆ ಮಾರಿ ಸಾಲ ಸಂದಿಸುವ ಬಗ್ಗೆ ಚಿಂತಿಸಿದ್ದೆ. ಅಷ್ಟೊತ್ತಿದೆ ನನ್ನ ಪತ್ನಿ ಮತ್ತು ಮಗಳು ಈ ರೀತಿಯ ಪ್ರಾಣಾಹುತಿ ಮಾಡಿಕೊಂಡಿರುವುದು ದಿಗ್ಭ್ರಮೆಯಾಗಿದೆ ಎಂದು ಮಹಿಳೆಯ ಪತಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply