ಜೀವ ಹೋದರೂ ಮೋದಿಯವರ ತಂದೆ ತಾಯಿಯ ಅವಮಾನ ಮಾಡಲಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಮಂಗಳವಾರ ಮಧ್ಯ ಪ್ರದೇಶದ ನೀಮಚ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡುತ್ತಾ, ಮೋದಿಯವರು ನನ್ನ ಕುಟುಂಬವನ್ನು ಅವಮಾನಿಸಿ ಮಾತನಾಡುತ್ತಾರೆ. ಆದರೆ ನನ್ನ ಜೀವ ಹೋದರೂ ಅವರ ಅಪ್ಪ ಅಮ್ಮನ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ನಾನು ಕಾಂಗ್ರೆಸಿಗ ಬಿಜೆಪಿಯವನಲ್ಲ ಎಂದು ಹೇಳಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಪೂರ್ವ ಕಾಂಗ್ರೇಸ್ ಮುಖಂಡರೂ ಹಾಗೂ ನೆಹರೂ-ಗಾಂಧಿ ಪರಿವಾರದ ಸದಸ್ಯರ ಮೇಲೆ ನಡೆಸಿದ ವಾಗ್ದಾಳಿಗೆ ಪ್ರತಿಯಾಗಿ ನಾನು ಯಾವತ್ತೂ ಮೋದೀಜಿಯವರ ತಂದೆ-ತಾಯಿಯನ್ನು ಅವಮಾನಿಸಲ್ಲ ಎಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರತೀಜ್ಞೆ ಮಾಡಿದ್ದಾರೆ.

ನಾನು ಪ್ರೀತಿಯಿಂದ ಪ್ರತಿಕಾರ ಪಡೆಯುವೆ ಆದರೆ ಮೋದೀಜಿಯವರ ತಂದೆ-ತಾಯಿಯನ್ನು ಯಾವತ್ತೂ ಅವಮಾನಿಸಲಾರೆ ಎಂದು ಕಾಂಗ್ರೇಸ್ ಅಧ್ಯಕ್ಷ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು. ವೈಯುಕ್ತಿಕ ದಾಳಿಯಿಂದ ಯಾವುದೇ ಪ್ರಯೋಜನವಿಲ್ಲ. ರಾಜಕೀಯ ವಿಷಯಗಳನ್ನು ರಾಜಕೀಯವಾಗಿಯೇ ಮುಗಿಸಬೇಕು. ನಾನು ಸತ್ತು ಹೋಗುವೆ, ಆದರೆ ತಂದೆ ತಾಯಿಯನ್ನು ಅವಮಾನಿಸಲಾರೆ ಎಂದು ಕಾಂಗ್ರೇಸ್ ಅಧ್ಯಕ್ಷ ಹೇಳಿದ್ದಾರೆ.

Leave a Reply