Representational Image

ಬೇಕಾಗುವ ಸಾಮಗ್ರಿಗಳು:

ತುಪ್ಪ – 2 ಟೇಬಲ್ ಚಮಚ
ಟೊಮೆಟೊ (ಸಣ್ಣದಾಗಿ ಕತ್ತರಿಸಿದ್ದು) – 1
ಶುಂಠಿ (ಸಣ್ಣದಾಗಿ ಕತ್ತರಿಸಿದ್ದು) – 15 ಗ್ರಾಮ್
ಹೆಸರು ಬೇಳೆ – ಅರ್ಧ ಕಪ್
ವೆಜಿಟೆಬಲ್ ಸ್ಟಾಕ್ – 5 ಕಪ್
ಹುರಿದು ಹುಡಿ ಮಾಡಿದ ಜೀರಿಗೆ -ಅರ್ಧ ಟೀ ಚಮಚ
ಅರಶಿನ ಹುಡಿ – ಅರ್ಧ ಟೀ ಚಮಚ
ಉಪ್ಪು – ರುಚಿಗೆ
ಲಿಂಬೆ ರಸ – ಒಂದು ಟೀ ಚಮಚ
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

ಹೆಸರು ಬೇಳೆಯನ್ನು ತೊಳೆದು ಬಸಿದು ಇಡಿ.
ಮಣ್ಣಿನ ಪಾತ್ರೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಸೇರಿಸಿ ಎರಡು ಮೂರು ನಿಮಿಷ ಬಾಡಿಸಿ,
ಅರಶಿನ ಹುಡಿ, ಹೆಸರು ಬೇಳೆ, ಅಗತ್ಯಕ್ಕೆ ಉಪ್ಪು, ವೆಜಿಟೆಬಲ್ ಸ್ಟಾಕ್ ಸೇರಿಸಿ, ಸಣ್ಣ ಉರಿಯಲ್ಲಿ ಒಂದು ಗಂಟೆ ಬೇಯಿಸಿ.
ತಣ್ಣಗಾದ ಬಳಿಕ ಇದನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ. ಪುನಃ ಮಣ್ಣಿನ ಪಾತ್ರೆಯಲ್ಲಿ ಹಾಕಿ 5 ನಿಮಿಷ ಕುದಿಸಿ.
ಜೀರಿಗೆ ಹುಡಿ, ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ

Leave a Reply