ದಕ್ಷಿಣ ಕನ್ನಡ : ಒಂದು ಕಡೆ ಪುರಾತನವಾದ ಪ್ರಸಿಧ್ಧ ದೇವಸ್ಥಾನಗಳು,ಇನ್ನೊಂದು ಕಡೆ ವಿಶಾಲವಾದ ಪ್ರಸಿಧ್ಧ ಮಸೀದಿಗಳು ಇದರ ನಡುವೆ ಪರಸ್ಪರ ಅವಲಂಬಿತರಾಗಿ ಜೀವಿಸುತ್ತಿರುವ ಹಿಂದು – ಮುಸ್ಲಿಂ ಸಹೋದರರು. ಹೌದು, ಈ ಊರು ಪಾತೂರು. ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿರುವ ಕಾಲದಲ್ಲಿ ಸೌಹಾರ್ಧತೆ ಬದುಕುತ್ತಿರುವ ಊರು. ಹಿಂದೂ ಸಹೋದರರ ಕಾರ್ಯಕ್ರಮಗಳಲ್ಲಿ ಮುಸ್ಲಿಂಮರು,ಮುಸ್ಲಿಂರ ಕಾರ್ಯಕ್ರಮಗಳಲ್ಲಿ ಹಿಂದೂಗಳು ಪರಸ್ಪರ ಸಹಕರಿಸುವುದು ಇಲ್ಲಿ ಸರ್ವ ಸಾಮಾನ್ಯವಾಗಿದೆ.

ಚೌತಿಯ ಮೆರವಣಿಗೆ,ಮಿಲಾದ್ ಮೆರವಣಿಗೆಗೆ ಹಾಗೂ ಇನ್ನಿತರ ಸಂದರ್ಭದಲ್ಲಿ ಪಾತೂರು ಪರಿಸರದಲ್ಲಿ ಸಿಹಿತಿಂಡಿ,ಪಾನೀಯ ವಿತರಿಸುವುದು ಇಲ್ಲಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಲ್ಲಿನ ಸೌಹಾರ್ದತೆಗೆ ಇಂತಹ ಹಲವಾರು ಉದಾಹರಣೆಗಳಿವೆ.ಆದರೆ ನಿನ್ನೆ ಚಂದ್ರಣ್ಣ ನೀಡಿದ ಇಫ್ತಾರ್ ಕೂಟ ಸರ್ವರ ಪ್ರಶಂಸಗೆ ಕಾರಣವಾಗಿದೆ.
ನೆರೆಯ ಕರ್ನಾಟಕದ ವ್ಯಕ್ತಿಯಾದ ಚಂದ್ರಣ್ಣ ತನ್ನ ಕಾಯಕವಾದ ಮೇಸ್ತ್ರಿ ಕೆಲಸವನ್ನು ಪಾತೂರು ಪರಿಸರದಲ್ಲಿ ಹೆಚ್ಚಾಗಿ ನಿರ್ವಹಿಸುವ ಕಾರಣ ಪಾತೂರಿನ ಜನರೊಂದಿಗೆ ಬಹಳ ಆತ್ಮೀಯವಾಗಿ ಗುರುತಿಸಿಕೊಂಡಿದ್ದಾರೆ.

ಚಂದ್ರಣ್ಣ ನ ಗೃಹಪ್ರವೇಶಕ್ಕೆ ಪಾತೂರಿನ ಮುಸ್ಲಿಂ ಸಹೋದರರಿಗೆ ರಂಝಾನ್ ಉಪವಾಸದಿಂದಾಗಿ ಹೋಗಲು ಸಾಧ್ಯವಾಗಲಿಲ್ಲ.ಇದನ್ನು ತಿಳಿದ ಚಂದ್ರಣ್ಣ ಮುಸಲ್ಮಾನರಿಗೆ ಪಾತೂರು ಜುಮಾ ಮಸೀದಿ ವಠಾರದಲ್ಲಿ ಇಪ್ತಾರ್ ಕೂಟವನ್ನು ಏರ್ಪಡಿಸಿದರು.ಸುಮಾರು 150 ಕ್ಕೂ ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.ಬಳಿಕ ಶೈಖುನಾ ಪಾತೂರು ಉಸ್ತಾದ್ ರೊಂದಿಗೆ ಪಾತೂರಿನ ಮುಸ್ಲಿಂ ಸಹೋದರರು ಚಂದ್ರಣ್ಣನ ಮನೆಗೆ ತಲುಪಿ ಶುಭ ಹಾರೈಸಿದರು.

ಈ ಇಫ್ತಾರ್ ಕೂಟವು ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.ಚಂದ್ರಣ್ಣನ ಈ ಸೌಹಾರ್ದತೆಯು ಊರಿನ ಎಲ್ಲರಿಗೂ ಮಾದರಿಯಾಗಲಿ.ಎಂದೆಂದಿಗೂ ಈ ಊರಲ್ಲಿ ಮತ ಸೌಹಾರ್ದತೆಯಿರಲಿ.

Representational Image

 

Leave a Reply