ನೆಹರೂರವರ ಜಾಗದಲ್ಲಿ ಜಿನ್ನಾ ಪ್ರಧಾನ ಮಂತ್ರಿಯಾಗಿರುತ್ತಿದ್ದರೆ ದೇಶವು ತುಂಡುತುಂಡಾಗುತ್ತಿರಲಿಲ್ಲ ಎಂದು ಬಿಜೆಪಿ ಅಭ್ಯರ್ಥಿಯೋರ್ವರು ಹೇಳಿಕೆ ನೀಡಿದ್ದಾರೆ.
“ಮೊಹಮ್ಮದ್ ಅಲಿ ಜಿನ್ನಾ ಓರ್ವ ಅಡ್ವಕೇಟ್ ಹಾಗೂ ವಿದ್ವಾಂಸರಾಗಿದ್ದರು… ಒಂದು ವೇಳೆ ಆ ಸಮಯದಲ್ಲಿ ಜಿನ್ನಾ ಪ್ರಧಾನಿಯಾಗಬೇಕೆಂದು ನಿರ್ಣಯ ತೆಗೆದುಕೊಂಡಿದ್ದರೆ,ಈ ದೇಶ ತುಂಡು ತುಂಡಾಗುತ್ತಿರಲಿಲ್ಲ” ಎಂಬುದಾಗಿ
ಮಧ್ಯ ಪ್ರದೇಶದ ರತ್ಲಾಮ್-ಝಾಬುವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುಮಾನ್ ಸಿಂಗ್ ಡಾಮೋರ್ ಹೇಳಿದ್ದಾರೆ.
“ಸ್ವಾತಂತ್ರ್ಯದ ಸಮಯ ಒಂದು ವೇಳೆ ಜವಾಹರಲಾಲ್ ನೆಹರೂ ಹಠ ಮಾಡದಿರುತ್ತಿದ್ದರೆ ದೇಶ ತುಂಡಾಗುತ್ತಿರಲಿಲ್ಲ” ಎಂದವರು ಹೇಳಿದರು.

Leave a Reply