Representational Image : Flickr

ಪಿಲಿಬಿತ್(ಉತ್ತರ ಪ್ರದೇಶ) : ಮಕ್ಕಳು ಆಟವಾಡುವಾಗ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಯಾಕೆಂದರೆ ಮಕ್ಕಳು ಯಾವಾಗ ಎಂತಹ ಅನಾಹುತ ಮೈಮೇಲೆ ಎಳೆದುಕೊಳ್ಳುತ್ತಾರೆ ಎಂದು ಊಹಿಸಲೂ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ…

ಉತ್ತರ ಪ್ರದೇಶದಲ್ಲಿ ಸ್ನೇಹಿತರ ಜೊತೆ ಕಣ್ಣಾ ಮುಚ್ಚಾಲೆ (Hide and seek) ಆಟವಾಡುತ್ತಿದ್ದ ಐದು ವರ್ಷದ ಹುಡುಗ ದಾರುಣವಾಗಿ ಮೃತ ಪಟ್ಟ ಘಟನೆ ನಡೆದಿದೆ. ಅಥರ್ವ್ ಗುಪ್ತಾ ಹೆಸರಿನ ನರ್ಸರಿಯಲ್ಲಿ ಕಲಿಯುತ್ತಿದ್ದ ಹುಡುಗ ಸ್ನೇಹಿತರ ಕಣ್ಣು ತಪ್ಪಿಸಲು ಐಸ್ ಕ್ರೀಮ್ ಟ್ರಾಲಿಯೊಳಗೆ ಅವಿತು ಕೊಂಡಿದ್ದನು. ದುರದೃಷ್ಟವಶಾತ್ ಹೊರಗಿನಿಂದ ಚೇಂಬರ್ ಮುಚ್ಚಿಕೊಂಡ ಪರಿಣಾಮವಾಗಿ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಬಹಳ ಸಮಯವಾದರೂ ಮಗ ಮನೆಗೆ ಬರದ್ದನ್ನು ಕಂಡು ಹೆತ್ತವರು ಹುಡುಕಾಟ ಪ್ರಾರಂಭಿಸಿದರು.. ಈ ವೇಳೆ ಐಸ್ ಕ್ರೀಂ ಟ್ರಾಲಿ ತೆರದು ನೋಡಿದಾಗ ಮಗನ ಶವ ಸಿಕ್ಕಿದೆ…

ವ್ಯಾಪರ್ ಮಂಡಲ್ ಸಮಿತಿಯ ಅಧ್ಯಕ್ಷರಾಗಿರುವ ಬಾಲಕನ ತಂದೆ ಅಜಯ್ ಗುಪ್ತಾ ಅವರು ತಮ್ಮ ಮಗನಿಗೆ ಭಾನುವಾರ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಸೋಮವಾರ ಆತನನ್ನು ಶಾಲೆಗೆ ಕಳುಹಿಸಿರಲಿಲ್ಲ.

Leave a Reply