Representational Image credit : Needpix

ಹೈದರಾಬಾದ್: ಪತ್ನಿಯ ಆಕ್ಷೇಪಾರ್ಹ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬರು ತೊಂದರೆಗೆ ಸಿಲುಕಿದ್ದಾರೆ. ಎಲ್ಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ವರದಿಯ ಪ್ರಕಾರ ಆರೋಪಿ ಮಹೇಶ್ವರಂ ನಿವಾಸಿ ಪಿ.ರವೀಂದರ್ (27) ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರಗಳ ಪ್ರಕಾರ, ದಂಪತಿ ಪ್ರೇಮ ವಿವಾಹದ ಕೆಲವು ದಿನಗಳ ನಂತರ, ತನ್ನ ಪತಿಗೆ ಇತರ ಹುಡುಗಿಯರೊಂದಿಗೆ ಸಂಬಂಧ ಹೊಂದಿರುವುದನ್ನು ಪತ್ನಿ ಕಂಡುಕೊಂಡರು. ಈ ಬಗ್ಗೆ ಆಕೆ ಸ್ಪಷ್ಟೀಕರಣವನ್ನು ಪಡೆಯಲು ಪ್ರಯತ್ನಿಸಿದಾಗ, ಈ ವಿಷಯವು ತೀವ್ರವಾದ ವಾಗ್ವಾದಗಳಿಗೆ ಕಾರಣವಾಯಿತು. ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೈಬರ್ ಕ್ರೈಮ್ ವಿಭಾಗವು ಮೊಬೈಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್ ಅನ್ನು ಆರೋಪಿಯ ಕೈಯಿಂದ ವಶಪಡಿಸಿಕೊಂಡಿದೆ, ಅದರಲ್ಲಿ ಮಹಿಳೆಯ ಆಕ್ಷೇಪಾರ್ಹ ಚಿತ್ರಗಳಿತ್ತು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ನೀಡಿದರು. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಮತ್ತು ಮಹಿಳೆ ಸಂಪರ್ಕಕ್ಕೆ ಬಂದಿದ್ದು, ಬಳಿಕ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.

Leave a Reply