ನವದೆಹಲಿ:ಭಾರತದ ಮೊದಲ ಮಹಿಳಾ ಶಾಸಕಿ ಮತ್ತು ಸರ್ಜನ್ ಮುತ್ತುಲಕ್ಷ್ಮಿ ರೆಡ್ಡಿಯವರ 133ನೇ ಹುಟ್ಟಿದ ಹಬ್ಬವನ್ನು ಗೂಗಲ್ ಡೂಡಲ್ ಮೂಲಕ ಆಚರಿಸಿದೆ. ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾರತೀಯ ವೈದ್ಯೆ ಮತ್ತು ಪತ್ರಕರ್ತೆ,ಸಾಮಾಜಿಕ ಸುಧಾರಕಿ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ. ಅವರು ಭಾರತದ ಮೊದಲ ಮಹಿಳಾ ಶಾಸಕಿ. ಮುತ್ತುಲಕ್ಷ್ಮಿ ರೆಡ್ಡಿ 1927 ರಲ್ಲಿ ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಇವರು ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿ. ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯ ಮೊದಲ ಮಹಿಳಾ ಶಾಸಕಿ.

ಮಹಿಳಾ ಕಾಲೇಜು, ಸರ್ಕಾರಿ ಹೆರಿಗೆ ಮತ್ತು ನೇತ್ರಶಾಸ್ತ್ರೀಯ ಆಸ್ಪತ್ರೆಯಲ್ಲಿನ ಮೊದಲ ಮಹಿಳಾ ಸರ್ಜನ್.
ಲಿಂಗ ಅಸಮಾನತೆ ವಿರುದ್ದ ಹೋರಾಟ ನಡೆಸಿಕೊಂಡು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ ಕೀರ್ತಿ ಮುತ್ತುಲಕ್ಷ್ಮಿಯವರದ್ದು. ಅವರ ಹುಟ್ಟಿದ ಹಬ್ಬವನ್ನು ಪ್ರತಿವರ್ಷ ಆಸ್ಪತ್ರೆ ದಿನಾಚರಣೆಯನ್ನಾಗಿ ಆಚರಿಸುವಂತೆ ತಮಿಳುನಾಡು ಸರ್ಕಾರ ಸೋಮವಾರವಷ್ಟೆ ಪ್ರಕಟಿಸಿದೆ.

1886ರಲ್ಲಿ ತಮಿಳುನಾಡಿನ ಮುದುಕ್ಕೊಟ್ಟೆನಲ್ಲಿ ಜನಿಸಿದ ಡಾ.ರೆಡ್ಡಿ, ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಮಾಡಿದರು. 1912ರಲ್ಲಿ ಭಾರತದ ಮೊದಲ ಮಹಿಳಾ ವೈದ್ಯರಾದರು. ಮದ್ರಾಸಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮೊದಲ ಹೌಸ್ ಸರ್ಜನ್ ಎನ್ನಿಸಿಕೊಂಡರು.

ಭಾರತೀಯ ಮಹಿಳಾ ವೈದ್ಯರ ಸಂಘವನ್ನು 1918ರಲ್ಲಿ ಸ್ಥಾಪಿಸಿದರು. ಮದ್ರಾಸ್ ವಿಧಾನ ಪರಿಷತ್ತಿನ ಮೊದಲ ಮಹಿಳಾ ಸದಸ್ಯರಾಗಿ ಆಯ್ಕೆಯಾದರು. ಇಮಾರಲ್ ಟ್ರಾಫಿಕ್ ಕಂಟ್ರೋಲ್ ಕಾಯ್ದೆ, ದೇವದಾಸಿ ಪದ್ಧತಿ ನಿರ್ಮೂಲನ ಕಾಯ್ದೆಗಳನ್ನು ಜಾರಿಗೊಳಿಸುವುದರಲ್ಲಿ ಅವರ ಪಾತ್ರ ಮಹತ್ವದ್ದು.

Leave a Reply