ಜರ್ಮನಿ : ಮುಸ್ಲಿಮರಿಗೆ ಬಾಡಿಗೆ ಮನೆ ನೀಡಿದರೆ ಅಥವಾ ಅವರು ನೆರೆಯವರಾಗಿ ವಾಸ್ತವ್ಯಕ್ಕೆ ಬಂದರೆ ನೆರೆಯವರಿಗೆ ಕಷ್ಟವಾಗುತ್ತದೆ ಎಂದು ಹೇಳಿ ಮುಸ್ಲಿಮ್ ಮಹಿಳೆಗೆ ಬಾಡಿಗೆ ಮನೆ ಪಡೆಯಲು ಸಹಾಯ ಮಾಡುವ ಸೈಟ್ ಎರ್‍ ಬಿಎನ್‍ಬಿ ಮಹಿಳೆಯನ್ನು ಅವರ ಪಟ್ಟಿಯಿಂದ ಹೊರಗಿಟ್ಟಿದೆ.

ಇಪ್ಪತೈದು ವರ್ಷದ ನೂರ್‍ ಜಹಾನ್ ಸಾಲಿಕ್‍ರಿಗೆ ಬಿಎನ್‍ಬಿ ಸೈಟ್ ತಾರತಮ್ಯದಿಂದ ನಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.

ಜರ್ಮನಿಯ ಹ್ಯಾಂಬರ್ಗ್‍ನಲ್ಲಿ ನೂರ್‍ ಜಹಾನ್ ಬಾಡಿಗೆ ಮನೆ ಹುಡುಕಾಟ ನಡೆಸಿದ್ದರು. ಇಷ್ಟ ಪಡುವ ರೀತಿಯ ಮನೆ ಸಿಕ್ಕಿದ್ದು ಅದನ್ನು ಒದಗಿಸಲು ಮನೆಯೊಡತಿ ಕಾಲಡಿಯರನ್ನು ಸಂಪಿರ್ಕಿಸಿದಾಗ ಅವರ ಬೇಡಿಕೆಯನ್ನು ನಿರಾಕರಿಸಲಾಗಿತ್ತು.

ನಂತರ ಅದಕ್ಕೆ ಕಾರಣ ಕೇಳಿದಾಗ ಕಾಲಡಿಯಾ ಖಾಸಗಿಯಾಗಿ ಮನೆಯನ್ನು ನಿರಾಕರಿಸಿದ ಕಾರಣವನ್ನು ತಿಳಿಸಿದ್ದು ನೀವು ಮುಸ್ಲಿಮ್ ಆಗಿ ಮಫ್ತಾ ಧರಿಸುವ ಕಾರಣದಿಂದ ನೆರೆಯವರಿಗೆ ಕಷ್ಟವಾಗುತ್ತಿದೆ ಹೀಗಾಗಿ ನಿಮಗೆ ಮನೆಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದರು.

Leave a Reply