Representational image courtesy - NDTV Food

ಬೇಕಾಗುವ ಸಾಮಗ್ರಿಗಳು:

ಬಿಳಿ ಎಳ್ಳು- 1 ದೊ.ಸ್ಪೂ., ಬಿಳಿ ಕಸ್‍ಕಸ್- 1 ಟೀ.ಸ್ಪೂ., ತೆಂಗಿನ ತುರಿ- 1 ಕಪ್, ಬೆಳ್ಳುಳ್ಳಿ ಶುಂಠಿ ಪೇಸ್ಟ್- ಎರಡೂವರೆ ದೊ.ಸ್ಪೂ., ಉಪ್ಪು- ರುಚಿಗೆ ತಕ್ಕಷ್ಟು, ಹಳದಿ ಹುಡಿ- 2 ಟೀ.ಸ್ಪೂ., ಎಣ್ಣೆ- 4 ದೊ.ಸ್ಪೂ., ನೀರುಳ್ಳಿ- 2, ಮೆಣಸಿನ ಹುಡಿ- 4 ದೊ.ಸ್ಪೂ., ಟೊಮೆಟೊ- 3,ಗರಂ ಮಸಾಲೆ ಹುಡಿ- 1 ದೊ.ಸ್ಪೂ.,ಕೊತ್ತಂಬರಿ ಸೊಪ್ಪು- ಅಲಂಕರಿಸಲು,
ಕೋಳಿ- ಒಂದೂವರೆ ಕೆ.ಜಿ., ಹುರಿದ ನೀರುಳ್ಳಿ ಒಂದೂವರೆ ನೀರುಳ್ಳಿ.

ತಯಾರಿಸುವ ವಿಧಾನ:

ಎಳ್ಳು ಮತ್ತು ಕಸ್‍ಕಸ್ ಹುರಿದು ಅದಕ್ಕೆ ತೆಂಗಿನ ತುರಿ ಹಾಕಿ ನೀರು ಆರುವ ತನಕ ಹುರಿಯಿರಿ.ಹುರಿದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ, ಅದರೊಂದಿಗೆ ಹುರಿದ ನೀರುಳ್ಳಿ, ಅರ್ಧ ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಉಪ್ಪು ಮತ್ತು ಹಳದಿ ಹಾಕಿ ಕಡೆಯಿರಿ. ಕೋಳಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿ, ಮೇಲಿನ ಮಸಾಲೆಯೊಂದಿಗೆ ಸೇರಿಸಿ 15-20 ನಿಮಿಷ ತನಕ ಇಡಿ.ಎಣ್ಣೆ ಬಿಸಿ ಮಾಡಿ ಸಪೂರ ಕತ್ತರಿಸಿದ ನೀರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿಯಿರಿ. ಉಳಿದ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಮೆಣಸಿನ ಹುಡಿ ಹಾಕಿ ಒಂದೆರಡು ನಿಮಿಷ ಹುರಿದು ಟೊಮೆಟೊ ಹಾಕಿ ಎಣ್ಣೆ ಬಿಡುವ ತನಕ ಹುರಿಯಿರಿ. ಈಗ ಅದ್ದಿಟ್ಟ ಕೋಳಿ ಹಾಕಿ ಬೇಯಿಸಿ. ಅರ್ಧ ಬೆಂದಾಗ ಗರಂ ಮಸಾಲೆ ಹುಡಿ ಹಾಕಿ. ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಇರುವಾಗಲೇ ತಿನ್ನಿ.

Leave a Reply