Just Chicken and grape pic/ Representational

ಯುರೋಪ್-ಚೈನೀಸ್ ಅಡುಗೆಯಿದು. ದ್ರಾಕ್ಷಿ ಬೆಳೆಯುವ ಸಂದರ್ಭದಲ್ಲಿ ಇಟೆಲಿ, ಫ್ರಾನ್ಸ್, ಚೈನದಲ್ಲಿ ಅವರು ತಯಾರಿಸುವ ಸ್ಪೆಶಲ್. ಸ್ವಲ್ಪ ಹೆಚ್ಚು ಕರಿ ಮೆಣಸು ಸೇರಿಸಿಕೊಂಡು ನಾವೂ ರುಚಿಕರವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಕಪ್ಪು ದ್ರಾಕ್ಷೆ- ಅರ್ಧ ಕಿಲೋ, ಕೋಳಿ- ಒಂದು ಕಿಲೋ, ಕರಿ ಮೆಣಸಿನ ಹುಡಿ- 2 ಟಿ.ಸ್ಪೂ., ಉಪ್ಪು ರುಚಿಗೆ, ಎಣ್ಣೆ- 1 ಟಿ.ಸ್ಪೂ., ಹಸಿಮೆಣಸು- 2, ಬೆಳ್ಳುಳ್ಳಿ ಹುಡಿ- 1/2 ಸ್ಪೂ., ಸೋಯಾಸಾಸ್- 1 ಸ್ಪೂ., ಅನಾರ್ ಸಿರಪ್- 1/2 ಸ್ಪೂ., ರೋಝ್ ಮೆರಿ- 1/2 ಸ್ಪೂ.,ಜೇನುತುಪ್ಪ- 2 ಸ್ಪೂ., ಟೊಮೆಟೊ ಪೇಸ್ಟ್- 1 ಸ್ಪೂ.

ತಯಾರಿಸುವ ವಿಧಾನ:

1/2 ಕಿ.ಲೋ. ಕಪ್ಪು ದ್ರಾಕ್ಷೆಯನ್ನು ಚೆನ್ನಾಗಿ ತೊಳೆದು ಬೀಜ ತೆಗೆಯದೆಯೇ ಸ್ಮ್ಯಾಶ್ ಮಾಡಿ. ಬಳಿಕ ತೊಳೆದ ಶುಚಿಗೊಳಿಸಿದ ಕೋಳಿಗೆ ಅದನ್ನು ಸೇರಿಸಿ. ಅದನ್ನು ಗಟ್ಟಿಯಾಗಿ ಮುಚ್ಚಿದ ಪಾತ್ರೆಗೆ ಹಾಕಿ ಬೇಯಿಸಿ.ದ್ರಾಕ್ಷೆಯ ನೀರು ಕೋಳಿಗೆ ಸೇರಿಕೊಳ್ಳುವಂತಾಗಲು ನೀರನ್ನು ಸೇರಿಸಬಾರದು. ಚೆನ್ನಾಗಿ ಬೆಂದ ಬಳಿಕ ಅದಕ್ಕೆ ಉಪ್ಪು, ಕರಿಮೆಣಸಿನ ಹುಡಿ, ಸಣ್ಣಗೆ ಕತ್ತರಿಸಿದ ಮೆಣಸು, ನಾಲ್ಕೈದು ಬೇಬಿಕಾನ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪುನಃ ಮುಚ್ಚಿ ಮೆಲ್ಲನೆ ಉರಿಯಲ್ಲಿ ಒಲೆಯಲ್ಲಿಡಿ.ಚಿಕನ್ ಚೆನ್ನಾಗಿ ಆರಿದ ಬಳಿಕ ಬೆಳ್ಳುಳ್ಳಿ ಹುಡಿ,ಸೋಯಾಸೋಸ್, ಅನಾರ್ ಸಿರಪ್, ರೋಝ್ ಮೇರಿ ಸೇರಿಸಿ. ಅಗತ್ಯವೆನಿಸಿದರೆ ಸ್ವಲ್ಪ ಟೊಮೆಟೊ ಪೇಸ್ಟ್ ಸೇರಿಸಿ. ಚಿಕನ್‍ನಲ್ಲಿ ಮಸಾಲೆಗಳು ಬೆಂದು ಗ್ರೇವಿ ಬತ್ತುವಾಗ ಜೇನುತುಪ್ಪ ಸೇರಿಸಿ ಕೆಳಗಿಳಿಸಿ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹರಡಿ ಪಾತ್ರೆಯಲ್ಲಿ ಬಡಿಸಿ.(ಗ್ರೇಪ್ ಚಿಕನ್‍ನೊಂದಿಗೆ ತಿನ್ನಲು ಗ್ರೀನ್ ಆ್ಯಪಲ್ ಸಲಾಡ್ ತಯಾರಿಸುವುದು)

Leave a Reply